ಬೈಲುಕುಪ್ಪೆ: ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಬೈಲುಕುಪ್ಪೆ ಒಂದನೇ ಕ್ಯಾಂಪ್ ಮುಖ್ಯರಸ್ತೆ ಪಕ್ಕದಲ್ಲಿ ಭಾನುವಾರ ತೇಗದ ಮರ ಬುಡ ಸಮೇತ ಮುರಿದು ಭಾನುವಾರ ಬಿದ್ದಿದ್ದು, ಸ್ಥಳದಲ್ಲಿ ಯಾರೂ ಇಲ್ಲದಿದ್ದ ಕಾರಣ ಅನಾಹುತ ಸಂಭವಿಸಿಲ್ಲ.
ಕೆಲಕಾಲ ವಾಹನ ಸವಾರರಿಗೆ ತೊಂದರೆಯಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಮರ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಉಪ ಅರಣ್ಯಾಧಿಕಾರಿ ಮುಜೀಮ್ ಮಿಲ್, ಸಿಬ್ಬಂದಿ ಆನಂದ್, ಗ್ರಾಮಸ್ಥರಾದ ಶಿವು, ಜವರೇಗೌಡ, ರಾಮು ಇದ್ದರು.