ಜಿಲ್ಲೆ

ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ

ಸಿದ್ದಾಪುರ: ಗಾಳಿ, ಮಳೆಗೆ ಸಿದ್ದಾಪುರ-ಮೈಸೂರು ಮುಖ್ಯರಸ್ತೆಯಲ್ಲಿ ಗುರವಾರ ಬೆಳಗ್ಗೆ ಅಡ್ಡಲಾಗಿ ಭಾರಿ ಗಾತ್ರದ ಮರ ಬಿದ್ದು, ಮೂರು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ವಾಹನಗಳ ಸಂಚಾರಕ್ಕೆ ತಡೆಯುಂಟಾಯಿತು.

ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸೆಸ್ಕ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿದ್ಯುತ್ ಹರಿವು ಸ್ಥಗಿತಗೊಳಿಸುವಂತೆ ತಿಳಿಸಿ, ಬಳಿಕ ರಸ್ತೆಗೆ ಉರುಳಿ ಬಿದ್ದಿದ್ದ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.