ರಾಯಬಾಗ: ತೋಟಪಟ್ಟಿಗಳ ರಸ್ತೆ ಸುಧಾರಿಸುವುದರಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ತಾಲೂಕಿನ ಜಲಾಲಪುರ ಗ್ರಾಮಕ್ಕೆ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಪಂಚಾಯತ ರಾಜ್ ಇಲಾಖೆಯಿಂದ ಮಂಜೂರಾದ ೬೦ ಲಕ್ಷ ರೂ. ಅನುದಾನದಲ್ಲಿ ಬಸ್ ನಿಲ್ದಾಣದಿಂದ ಎಸ್‌ಸಿ ಕಾಲನಿ ಮತ್ತು ದಾವನೆ ತೋಟದವರೆಗೆ ಸಿಸಿ ರಸ್ತೆ ಹಾಗೂ ಮೇಖಳಿ-ರಾಯಬಾಗ ಮುಖ್ಯ ರಸ್ತೆಯಿಂದ ದಾಸರಕೋಡಿವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಮಾತನಾಡಿ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸೂಚಿಸಿದರು.
ಗ್ರಾಪಂ ಅಧ್ಯಕ್ಷೆ ದೀಪಾ ಚೌಗಲಾ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪೂರೆ, ರಾಜು ಜಾಧವ, ಬಸು ಅವ್ವನ್ನವರ, ಮಲ್ಲು ಜಗದಾಳೆ, ಕಿರಣ ಖನದಾಳೆ, ಸಂಜು ಜಾಧವ, ವಸಂತ ಕಾಂಬಳೆ, ಅಣ್ಣಾಸಾಹೇಬ ಹೇರವಾಡೆ ಬಸು ಚೌಗಲಾ, ಕಲಗೌಡ ಪಾಟೀಲ, ಬಸವರಾಜ ನಾಯಿಕ, ಪಿ.ಎ.ನಾಯಿಕ, ಸಂಜೀವ ಒಡೆಯರ, ಶಂಕರಯ್ಯ ಹಿರೇಮಠ, ಈರಪ್ಪ ನಾಯಿಕ, ಪರಸಪ್ಪ ದಾಸರ, ಸಂಗಣ್ಣ ದತ್ತವಾಡೆ, ವಿಠ್ಠಲ ಪೂಜಾರಿ, ತಮ್ಮಣ್ಣಿ ಕೊಟ್ರೆ, ಸೋಮು ಭಜಂತ್ರಿ, ಸುನೀಲ ಬಂಡಾರೆ, ಮಹಾಂತೇಶ ಜಾನ್ವೆಕರ ಇತರರಿದ್ದರು.