ಜಿಲ್ಲೆ

ರಸ್ತೆ ಸುಧಾರಣೆಯಿಂದ ರೈತರಿಗೆ ಅನುಕೂಲ

ರಾಯಬಾಗ: ಎಲ್ಲ ತೋಟಪಟ್ಟಿಗಳ ರಸ್ತೆ ಸುಧಾರಿಸುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮದ ಅಭಿವೃದ್ಧಿ ಯೋಜನೆಯಡಿ ಮಂಜೂರಾದ 5 ಲಕ್ಷ ರೂ. ಅನುದಾನದಲ್ಲಿ ದಿಗ್ಗೆವಾಡಿ-ಜಲಾಲಪುರ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಬಾವನಸೌಂದತ್ತಿ ಗ್ರಾಮದ ಸವದತ್ತಿವಾಡಿಯಲ್ಲಿ ಜಿಪಂ ಇಲಾಖೆಯಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಂಜೂರಾದ 20 ಲಕ್ಷ ರೂ. ಅನುದಾನದಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಹಾಗೂ ಎಲ್ಲ ಕಡೆ ಹೊಸ ಅಂಗನವಾಡಿ ನಿರ್ಮಿಸಲಾಗುತ್ತಿದೆ ಎಂದರು.

ಜಿಪಂ ಎಇಇ ರಾಜೇಶ ಡಂಗ, ಬಾವನಸೌಂದತ್ತಿ ಗ್ರಾಪಂ ಅಧ್ಯಕ್ಷ ರಾಮಚಂದ್ರ ಕಾಟೆ, ಉಪಾಧ್ಯಕ್ಷ ಅಝಾದ ತಾಶಿವಾಲೆ, ಪಿಡಿಒ ಸಂಗಮೇಶ ನ್ಯಾಮಗೌಡ, ಅನಿಲ ಹಂಜೆ, ಮಹೇಶ ಕರಮಡಿ, ಧರೆಪ್ಪಾ ಮಿರ್ಜೆ, ಅಪ್ಪಾಸಾಬ ಮೈಶಾಳೆ, ಪ್ರಕಾಶ ಮಿರ್ಜೆ, ಸಂಜೀವ ಮೈಶಾಳೆ, ಗಂಗಾಧರ ಮೈಶಾಳೆ, ಮುಸಾ ಜಮಾದಾರ, ಬೋಲಾ ಕಡಾಳೆ, ಪ್ರಕಾಶ ಸಗರೆ, ಶೇಖರ ಕಾಂಬಳೆ, ಮಹಾದೇವ ಕೋಳಿ, ಚಿದಾನಂದ ಸಲಗರೆ, ಅಶೋಕ ಮೈಶಾಳೆ, ವಜ್ರಮುನಿ ಕಾಂಬಳೆ, ಗಜೇಂದ್ರ ಜಲಾಲಪುರೆ, ಅಣ್ಣಪ್ಪ ಖೋತ, ಜಿನ್ನಪ್ಪ ಚಂಪೂ, ರಾಜು ಪಾಟೀಲ ಇತರರಿದ್ದರು.