filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 39; 
ಜಿಲ್ಲೆ

ರಸ್ತೆ-ವೃತ್ತಗಳಿಗೆ ಹೆಸರಿಡಿ

ಕಂಪ್ಲಿ: ಸರ್ವಜ್ಞರ ತ್ರಿಪದಿಗಳಲ್ಲಿ ಅರೋಗ್ಯಕರ ಸಮಾಜವನ್ನು ನಿರ್ಮಿಸುವ ಚಿಕಿತ್ಸಕ ಗುಣಗಳಿವೆ ಎಂದು ಮೆಟ್ರಿ ಗ್ರಾಮದ ಕುಂಬಾರ ಶಾಲಿವಾಹನ ಸಂಘದ ತಾಲೂಕು ಖಜಾಂಚಿ ಕುಂಬಾರ ರಾಜಪ್ಪ ಹೇಳಿದರು.

ತಹಸಿಲ್ ಕಚೇರಿ ಸಭಾಂಗಣದಲ್ಲಿ ಕವಿ ಸರ್ವಜ್ಞ ಜಯಂತ್ಯುತ್ಸವದಲ್ಲಿ ಗುರುವಾರ ಮಾತನಾಡಿದರು. ಸರ್ವಜ್ಞನ ತತ್ವ ಆದರ್ಶಗಳನ್ನು ಜನರಲ್ಲಿ ಪ್ರೇರೇಪಿಸಲು ರಸ್ತೆ, ವೃತ್ತಗಳಿಗೆ ಸರ್ವಜ್ಞರ ಹೆಸರಿಡಬೇಕು. ತಾಲೂಕಿಗೊಂದರಂತೆ ಸರ್ವಜ್ಞ ಸಮುದಾಯ ಭವನ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖ ಮಾತನಾಡಿ, ಎಲ್ಲ ಕ್ಷೇತ್ರಗಳ ಸುಧಾರಣೆಗೆ ಸರ್ವಜ್ಞ ತ್ರಿಪದಿಗಳ ಮೂಲಕ ಶ್ರಮಿಸಿದ್ದಾರೆ. ಮಕ್ಕಳಿಗೆ ಸರ್ವಜ್ಞರ ತ್ರಿಪದಿಗಳನ್ನು ತಿಳಿಸಬೇಕೆಂದರು.

ಶಿರಸ್ತೇದಾರ್ ಎಸ್.ಡಿ.ರಮೇಶ್, ಸಿಬ್ಬಂದಿ ಮಾಲತೇಶ ದೇಶಪಾಂಡೆ, ಸುರೇಶ, ಸಂಘದ ಪದಾಧಿಕಾರಿಗಳಾದ ಕುಂಬಾರ ವೀರೇಶ್, ಗಾದಿಲಿಂಗಪ್ಪ, ನಾಗಲಿಂಗ, ರಾಮಾಂಜಿನಿ, ಕೆ.ವಿರೂಪಾಕ್ಷಿ ಇತರರಿದ್ದರು.