ಬ್ಯಾಡಗಿ, ಮುಖ್ಯರಸ್ತೆ, ಅಗಲೀಕರಣ, ಹೇಳಿಕೆ,Badagi, main road, widening, statement
ಹಾವೇರಿ: ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿರುವ ಮುಖ್ಯರಸ್ತೆ ವಿಸ್ತರಣೆ ಮಾಡಿಯೇ ಜನರ ಬಳಿ ಮತಕೇಳಲು ಬರುವೆ, ಸಾರ್ವಜನಿಕರಿಗೆ ರಸ್ತೆ ಕಾಮಗಾರಿ ಕುರಿತು ಯಾವುದೇ ಅನುಮಾನ ಬೇಡ.
ಹೀಗೆಂದು, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಜನರಿಗೆ ಮಾತು ಕೊಟ್ಟಿದ್ದಾರೆ.
ಬ್ಯಾಡಗಿ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಸತುಂಬುವ ಹೊಸ ವಾಹನಗಳಿಗೆ ಚಾಲನೆ, ನಿರಾಶ್ರಿತರಿಗೆ ಮನೆ ನಿರ್ಮಾಣದ ಆದೇಶ ಪತ್ರ ವಿತರಣೆ ನೆರವೇರಿಸಿ ಮಾತನಾಡಿದ ಅವರು, 13 ವರ್ಷಗಳಿಂದ ಸ್ಥಳೀಯ ಜನರು ಮುಖ್ಯರಸ್ತೆ ವಿಸ್ತರಣೆಗೆ ಹೋರಾಟ ಮಾಡುತ್ತಾ ಬಂದಿದ್ದಾರೆ. ನಾನು ಶಾಸಕನಾಗುವ ಮುನ್ನ ಹೋರಾಟದಲ್ಲಿಯೂ ಪಾಲ್ಗೊಂಡಿದ್ದೇ. ಶಾಸಕನಾದ ಬಳಿಕ ಸ್ಥಳೀಯ ಜನರ ಹಿತಕ್ಕಾಗಿ ರಸ್ತೆ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದ್ದೇ, ಈಗ ಕೊಟ್ಟ ಮಾತಿಗೆ ಬದ್ದವಾಗಿರುವೆ. ಯಾವುದೇ ಕಾರಣಕ್ಕೂ ರಸ್ತೆ ವಿಸ್ತರಣೆ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ. ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಿ ಮುಂಬರುವ ಚುನಾವಣೆಯಲ್ಲಿ ಮತಕೇಳಲು ಜನರು ಬಳಿ ತೆರಳುವೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಛತ್ರದ, ಪುರಸಭೆ ಅಧ್ಯಕ್ಷೆ ಸರೋಜ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ, ಸದಸ್ಯರಾದ ಶಿವರಾಜ ಅಂಗಡಿ, ರಾಮಣ್ಣ ಕೋಡಿಹಳ್ಳಿ, ಗಣೇಶ ಅಚಲಕರ, ಜೀತೇಂದ್ರ ಸುಣಗಾರ, ಈರಣ್ಣ ಬಣಕಾರ, ಚಂದ್ರಪ್ಪ ಶೆಟ್ಟರ, ವಿನಯ ಹಿರೇಮಠ, ಮಂಜಪ್ಪ ಬಾರ್ಕಿ ಪುರಸಭೆ ಮುಖ್ಯಾಧಿಕಾರಿ ಏಸು ಬೆಂಗಳೂರು ಇತರರಿದ್ದರು.