ಜಿಲ್ಲೆ

ರಸ್ತೆ, ಭವನ ಕಾಮಗಾರಿಗೆ ಚಾಲನೆ

ಬೀದರ್: ಅಲಿಯಾಬಾದ್ ಗ್ರಾಮದಿಂದ ಜನವಾಡವರೆಗೆ ರಸ್ತೆ (ರಿಂಗ್ ರೋಡ್) ಕಾಮಗಾರಿಗೆ ಚಾಲನೆ ನೀಡಲಾಯಿತು.

ಅಲಿಯಾಬಾದ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪುರೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಈ ಭಾಗದ ಜನರ ಬೇಡಿಕೆಯಂತೆ ನನ್ನ ಅನುದಾನದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಅಲಿಯಾಬಾದ್ ನಲ್ಲಿ 12 ಲಕ್ಷ ಅನುದಾನದಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಸಮುದಾಯ ಭವನ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗುಣಮಟ್ಟದ ಜತೆಗೆ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಸ್ಥಳೀಯರು ಕಾಮಗಾರಿ ಮೇಲೆ ನಿಗಾ ಇಡಬೇಕು ಎಂದರು.

ಬಿಜೆಪಿ ಬೀದರ್ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜೇಂದ್ರ ಪೂಜಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯಕುಮಾರ ಆನಂದೆ, ಪ್ರಮುಖರಾದ ಪೀರಪ್ಪ ಯರನಳ್ಳಿ, ಅಶೋಕ ಪಾಟೀಲ್ ಅಲಿಯಾಬಾದ್, ಶಿವರಾಜ ಕುದರೆ, ದೀಪಕ ಗಾದಗೆ, ಪಂಢರಿನಾಥ ಲದ್ದೆ, ಶರತ್, ರವಿ ಚಿನ್ನಪ್ಪನೋರ್, ಲಕ್ಷ್ಮಣರಾವ ರಾಠೋಡ್, ರಮೇಶರಾವ ಲದ್ದೆ, ಅಭಿಷೇಕ ಪೋಲಾ ಇತರರಿದ್ದರು.