ಚಿಕ್ಕಮಗಳೂರು: ಕೂದುವಳ್ಳಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ೧.೩೦ ಕೋಟಿ ರೂ. ಅನುದಾನ ನೀಡಿರುವುದಾಗಿ ಶಾಸಕಿ ನಯನ ಮೋಟಮ್ಮ ತಿಳಿಸಿದರು.
ತಾಲೂಕಿನ ಕೂದುವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜಟಿಗಪ್ಪ, ಭೂತಪ್ಪ ಮತ್ತು ಬ್ರಹ್ಮದೇವರ ದೇವಾಲಯಕ್ಕೆ ಭೇಟಿನೀಡಿ ಗ್ರಾಮಸ್ಥರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದೇವಾಲಯಕ್ಕೆ ಕಾಂಪೌAಡ್ ನಿರ್ಮಾಣ ಮತ್ತು ಇಂಟರ್‌ಲಾಕ್ ಹಾಕಿಸಿಕೊಡುವುದಾಗಿ ಭರವಸೆ ನೀಡಿದರು.
ಗ್ರಾಮದಲ್ಲಿ ವಾಸವಾಗಿರುವ ನಿವೇಶನ ರಹಿತರಿಗೆ ನಿವೇಶನ ನೀಡುವ ಕುರಿತು ಜಾಗಕಾಯ್ದಿರಿಸುವಂತೆ ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು, ಗ್ರಾಮದಲ್ಲಿರುವ ಜಾಗ ಪರಿಭಾವಿತ ಅರಣ್ಯಕ್ಕೆ ಸೇರಿದ್ದು, ಈಗ ಜಂಟಿ ಸರ್ವೆಕಾರ್ಯ ನಡೆಯುತ್ತಿದೆ. ಈ ಕೆಲಸ ಪೂರ್ಣಗೊಂಡ ಬಳಿಕ ಕಂದಾಯ ಸಚಿವರೊಂದಿಗೆ ಚರ್ಚೆ ನಡೆಸಿ ಜಾಗ ಉಳಿಸಿಕೊಡುವುದಾಗಿ ಹೇಳಿದರು.
ಸ್ತಿçà ಶಕ್ತಿ ಸಂಘದ ಮಹಿಳೆಯರು ಮನವಿ ಸಲ್ಲಿಸಿ ಗ್ರಾಮದಲ್ಲಿ ಒಟ್ಟು ೫ ಸಂಘಗಳಿವೆ. ಅದರಲ್ಲಿ ೨ ಸಂಘಕ್ಕೆ ಸಾಲ ವಿತರಣೆಯಾಗಿದೆ. ಉಳಿದ ಸಂಘಗಳಿಗೂ ಸಾಲ ಮಂಜೂರು ಮಾಡುವಂತೆ ಕೋರಿದರು. ಅರ್ಜಿ ಸಲ್ಲಿಸಿದರೆ ಸಾಲ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ತಿರುಗಾಡಲು ಅನುಕೂಲವಾಗುವಂತೆ ಮೂರು ಚಕ್ರದ ವಾಹನ ನೀಡುವಂತೆ ಗ್ರಾಮದ ಕೆ.ಸಿ.ದೊಡ್ಡಯ್ಯ ಶಾಸಕರನ್ನು ಕೋರಿದರು. ಸಂಬAಧಿಸಿದ ಇಲಾಖೆಯಿಂದ ವಾಹನ ಕೊಡಿಸುವುದಾಗಿ ತಿಳಿಸಿದ ಅವರು, ತೋರಣಮಾವು ಮತ್ತು ಚಿತ್ತುವಳ್ಳಿ ಗ್ರಾಮಸ್ಥರು ಸ್ಮಶಾನ ಮತ್ತು ನಿವೇಶನಕ್ಕೆ ಜಾಗ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗ್ರಾಮಸ್ಥರಾದ ಕೆ.ಎಂ.ಮAಜುನಾಥ, ಮಂಜಯ್ಯ, ಭದ್ರಯ್ಯ, ಕೆ.ಎಚ್.ಕೃಷ್ಣಪ್ರಸಾದ್, ರಮೇಶ್, ಮೋಹನ್‌ಕುಮಾರ್, ಕೆ.ಆರ್.ರವಿ, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಕೆ.ಎಚ್.ಸಂದೀಪ, ಕಾಂಗ್ರೆಸ್ ವಸ್ತಾರೆ ಹೋಬಳಿ ಅಧ್ಯಕ್ಷ ಪೂರ್ಣೇಶ್, ಮಾಜಿ ಅಧ್ಯಕ್ಷ ಸುಬ್ಬೇಗೌಡ, ಕಠಾರದಹಳ್ಳಿ ನವರಾಜ್, ಹುಣಸೇಮಕ್ಕಿ ಲಕ್ಷö್ಮಣ್, ಬಸಗೋಡು ಬಿ.ಡಿ.ರಮೇಶ್, ಜೋಳದಾಳ್ ಮಂಜುನಾಥ, ಕಂಬಿಹಳ್ಳಿ ಹುಚ್ಚಯ್ಯ ಇದ್ದರು.