ಜಿಲ್ಲೆ

ರಸ್ತೆ ನಿರ್ಮಾಣಕ್ಕೆ 173 ಕೋಟಿ ರೂ.ಅನುದಾನ ಮಂಜೂರು

ಚಿತ್ರದುರ್ಗ: ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು.

ಚಿತ್ರದುರ್ಗ ತಾಲೂಕು ಸಿರಿಗೆರೆಯಲ್ಲಿ ಐದು ಕೋಟಿ ರೂ.ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ವೈದ್ಯಾಧಿಕಾರಿ ಮತ್ತು ನೌಕರರ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಚಿಕ್ಕಜಾಜೂರಲ್ಲಿ 15 ಕೋಟಿ ರೂ.ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಎಲ್ಲ ಕಡೆ ಆಸ್ಪತ್ರೆ, ವಸತಿ ಗೃಹಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಬಡ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ವೈದ್ಯರ ಮೇಲಿದೆ ಎಂದರು.

ಹಿರೇಬೆನ್ನೂರು ವೃತ್ತದಿಂದ ಸಾಸಲು ವೃತ್ತದವರೆಗಿನ ರಸ್ತೆಗೆ 105 ಕೋಟಿ ರೂ., ಮದಕರಿಪುರದಿಂದ ಚಿತ್ರದುರ್ಗ ಬಾರ್ಡರ್‌ವರೆಗೆ ರಸ್ತೆ ನಿರ್ಮಾಣಕ್ಕೆ 65 ಕೋಟಿ ರೂ.ಮಂಜೂರಾಗಿದೆ. 3 ಕೋಟಿ ರೂ.ವೆಚ್ಚದ ಸಿಸಿ ರಸ್ತೆಗೆ ಟೆಂಡರ್ ಕರೆಯಲಾಗಿದೆ ಎಂದದು.

ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಟಿಎಚ್‌ಒ ಡಾ.ಬಿ.ವಿ. ಗಿರೀಶ್, ಗ್ರಾಪಂ ಅಧ್ಯಕ್ಷೆ ರೂಪಾ, ಉಪಾಧ್ಯಕ್ಷ ಕರಿಯಪ್ಪ, ಸದಸ್ಯರಾದ ಮೋಹನ್, ಸಿದ್ದೇಶ್, ನಾಗರಾಜ್, ಮೈತ್ರಿ ಪ್ರಭಾಕರ್, ದೇವಿಕಾ, ಶೋಭಾ, ಕವಿತಾ, ಮಂಜುಳಾ, ಮಂಜುನಾಥ್ ಮತ್ತಿತರರು ಇದ್ದರು.