ರಸ್ತೆ ದುರಸ್ತಿಗೆ ಆಗ್ರಹಿಸಿ ಸುಟ್ಟಟ್ಟಿ ಗ್ರಾಮದ ಹೊರವಲಯದಲ್ಲಿ ಗ್ರಾಮಸ್ಥರು ಪ್ರತಿಭಟಿಸಿದರು. ಮುಖಂಡರಾದ ಗಜಾನನ ಮಂಗಸೂಳಿ, ಶ್ರೀಕಾಂತ ಪೂಜಾರಿ, ಶಿವು ಗುಡ್ಡಾಪುರ, ಮುತ್ತಪ್ಪ ಸಂಕೋನಟ್ಟಿ, ಹನುಮಂತ ಅರ್ದಾವೂರ ಇತರರಿದ್ದರು. 
ಜಿಲ್ಲೆ

ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ಅಥಣಿ ಗ್ರಾಮೀಣ, ಬೆಳಗಾವಿ: ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಿಂದ ಯಲ್ಲಮ್ಮವಾಡಿ ಮಾರ್ಗವಾಗಿ ಕೊಕಟನೂರ ಗ್ರಾಮದವರೆಗಿನ 9 ಕಿ.ಮೀ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿಗೊಳಿಸಿ ಜನಸಾವಾನ್ಯರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಆಗ್ರಹಿಸಿ ಸುಟ್ಟಟ್ಟಿ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು. ಸಮೀಪದ ಸುಟ್ಟಟ್ಟಿ ಗ್ರಾಮದ ಹೊರವಲಯದ ರಸ್ತೆ ಮಧ್ಯೆ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ, ಹೋಮ ಮಾಡುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, 15 ವರ್ಷದಿಂದ ಈ ರಸ್ತೆಯನ್ನು ಡಾಂಬರೀಕರಣಗೊಳಿಸಿಲ್ಲ. ಸದ್ಯ ರಸ್ತೆ ಸಂಪೂರ್ಣ ಹಾಳಾಗಿ ತಗ್ಗು-ಗುಂಡಿಗಳು ಬಿದ್ದಿವೆ. ಇದರಿಂದ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆಯಂತೆ ಸರ್ಕಾರ ಅಥಣಿ ತಾಲೂಕಿನ ಹದಗೆಟ್ಟ ರಸ್ತೆ ದುರಸ್ತಿಗೆ ಕೋಟ್ಯಾಂತರ ರೂ. ಅನುದಾನ ಬಿಡುಗಡೆ ವಾಡುತ್ತಿದ್ದರೂ, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಅಭಿವೃದ್ಧಿಗೆ ವಿಳಂಭ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದರಿಂದ ಕಿ.ಮೀ ಗಟ್ಟಲೆ ವಾಹನ ದಟ್ಟನೆ ಉಂಟಾಯಿತು. ಸಂಬಂಧ ಪಟ್ಟ ಅಧಿಕಾರಿಗಳ ಜತೆಗೆ ದೂರವಾಣಿ ಕರೆ ಮೂಲಕ ಮಾತನಾಡಿ ಪ್ರತಿಭಟನಾನಿರತರು, ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಮಾತು ತಪ್ಪಿದರೆ ಮುಂದಿನ ವಾರ ಸಾವಳಗಿ ರಸ್ತೆ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಶ್ರೀಕಾಂತ ಪೂಜಾರಿ, ಶಿವು ಗುಡ್ಡಾಪುರ, ಮುಖಂಡರಾದ ಮುತ್ತಪ್ಪ ಸಂಕೋನಟ್ಟಿ, ಹನುಮಂತ ಅರ್ದಾವೂರ, ಸಾಬು ವಾಲಿ, ಪರಶುರಾಮ ಚಮಕೇರಿ, ಮಂಜುನಾಥ ಅಂಬಾಜಿ, ಕಲ್ಲಪ್ಪ ನಾಯಿಕ, ಬಸಪ್ಪ ಕೊಳಂಬಿ, ಬಸವರಾಜ ಕಂಕಣವಾಡಿ, ಪೀರಾಸಾಬ ನದಾಫ್, ನಾಗಪ್ಪ ಬೇಡರ, ಬಸಪ್ಪ ವಾಳಿ ಇತರರಿದ್ದರು.