ಐನಾಪುರ: ಸಮೀಪದ ಮೋಳೆ ಗ್ರಾಮದಲ್ಲಿ ಕೆಲ ಎಸ್ಸಿ ಸಮುದಾಯದ ರೈತರ ಜಮೀನಿಗೆ ಹೋಗಲು ಇದ್ದ ರಸ್ತೆಯನ್ನು ಹಲವು ರೈತರು ಒತ್ತುವರಿ ಮಾಡಿ ರಸ್ತೆ ಮುಚ್ಚಿಹಾಕಿದ್ದಾರೆ. ಅವುಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಕಾಗವಾಡ ಗ್ರೇಡ-೨ ತಹಸೀಲ್ದಾರ್ ರಶ್ಮಿ ಜಕಾತಿ ಅವರಿಗೆ ಮನವಿ ಸಲ್ಲಿಸಿದರು.
ಜಗನ್ನಾಥ ಹರಳೆ ಮಾತನಾಡಿ, ಎಸ್ಸಿ ಸಮುದಾಯದ ಕೃಷ್ಣಾ ಚಾಂಬಾರ (ಹರಳೆ), ಬಯಾಬಾಯಿ ಹರಳೆ, ವಿಠ್ಠಲ ಚಾಂಬಾರ, ರಮೇಶ ಹರಳೆ, ಪರಶುರಾಮ ಹರಳೆ ಅವರ ಜಮೀನುಗಳಿಗೆ ಹೋಗಿಬರಲು ರಸ್ತೆ ಇಲ್ಲದ ಕಾರಣ ಕೃಷಿ ಚಟುವಟಿಕೆ ಕೈಗೊಳ್ಳಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ರಸ್ತೆ ವ್ಯವಸ್ಥೆ ಮಾಡಿಕೊಡಬೇಕು. ಇಲ್ಲವಾದಲ್ಲಿ ತಹಸೀಲ್ದಾರ್ ಕಚೇರಿ ಎದುರು ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುಶೀಲಾಬಾಯಿ ಹರಳೆ, ಸುರೇಖಾ ಹರಳೆ, ಅಂಜನಾ ಹರಳೆ, ಬಯಾಬಾಯಿ ಹರಳೆ ಇತರರು ಇದ್ದರು.