ಜಿಲ್ಲೆ

ರಸ್ತೆ ಡಾಂಬರೀಕರಣ ಪೂರ್ಣ ಕಳಪೆ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ ಅಫಜಲಪುರ ತಾಲೂಕಿನ ಬಂದರವಾಡ- ತೆಗ್ಗೆಳ್ಳಿ ಶಿರಸಗಿ ಗ್ರಾಮದವರಿಗೆ ನಿರ್ಮಿಸಿರುವ ರಸ್ತೆ ಸಂಪೂರ್ಣ ಕಳಪೆಯಾಗಿದೆ ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಆರೋಪಿಸಿz್ದÁರೆ.
ಕೆಕೆಆರ್‌ಡಿಬಿಯ ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದು, ಕ್ರಿಯಾ ಯೋಜನೆ ಪ್ರಕಾರ ರಸ್ತೆ ನಿರ್ಮಿಸಿಲ್ಲ. ಒಂದು ಲೇಯರ್ ಮೆಟಲಿಂಗ್ ಮಾಡಿದ್ದು, ಅರ್ಧ ಇಂಚು ಡಾಂಬರ್ ಹಾಕಲಾಗಿದೆ. ಮಕ್ಕಳು ಕೈಯಿಂದ ಕಿತ್ತಿದ್ದರೂ ಕೈಗೆ ಬರುತ್ತಿದೆ. ಸಂಪೂರ್ಣ ಕಳಪೆಯಾಗಿದ್ದು, ಒಂದು ವರ್ಷವೂ ಬಾಳಿಕೆ ಬರುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ಅಧಿಕಾರಿಗಳು ಕ್ರಿಯಾ ಯೋಜನೆ ಪ್ರಕಾರ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಎಇಇ ಜತೆ ಮಾತನಾಡಿದ್ದು, ಗುಣಮಟ್ಟದ ರಸ್ತೆ ನಿರ್ಮಿಸಿದರೆ ಜನರಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಭಾರಿ ಸಮಸ್ಯೆ ಎದುರಾಗಿ, ಪುನಃ ತಗ್ಗು ಗುಂಡಿ ಬೀಳಿವೆ ಎಂದು ಹೇಳಿದ್ದಾರೆ.