ಶನಿವಾರಸಂತೆ: ಸ್ಥಳೀಯ ಕಾವೇರಿ ಪದವಿ ಪೂರ್ವ ಕಾಲೇಜಿಗೆ ತೆರಳುವ ಜಿ.ಪಂ.ಗೆ ಸೇರಿದ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಕಳಪೆಯಾಗಿದೆ.
ರಸ್ತೆ ಅಭಿವೃದ್ಧಿ ಕಾಮಗಾರಿಗೆ 4.80 ಲಕ್ಷ ರೂ. ಬಿಡುಗಡೆಯಾಗಿತ್ತು. ಶನಿವಾರಸಂತೆ ವ್ಯಾಪ್ತಿಯ ಜಿ.ಪಂ. ಇಂಜಿನಿಯರ್ ರಸ್ತೆ ಡಾಂಬರಿಕರಣ ಕಾಮಗಾರಿ ಕೈಗೊಂಡಿದ್ದಾರೆ. ಆದರೆ ಡಾಂಬರು ಹಾಕಿದ ಕೆಲವೇ ಸಮಯದಲ್ಲಿ ಕಿತ್ತು ಬರುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸುಮಾರು 200 ಮೀಟರ್‌ವರೆಗಿನ ರಸ್ತೆಯಲ್ಲಿ ಗುಂಡಿ ಮುಚ್ಚುವ ಕೆಲಸದಲ್ಲಿ ಜಿಪಂ ಇಂಜಿನಿಯರ್‌ಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.