ಲಿಂಗದಹಳ್ಳಿ-ತಣಿಗೆಬೈಲು ರಸ್ತೆಯಲ್ಲಿದ್ದ ಗುಂಡಿಗಳನ್ನು ಮುಚ್ಚುತ್ತಿರುವುದು.  
ಜಿಲ್ಲೆ

ರಸ್ತೆ ಗುಂಡಿ ಮುಚ್ಚಿದ ಪಿಡಬ್ಲುೃಡಿ

ಎಸ್.ಎನ್.ರವೀಂದ್ರ

ಲಿಂಗದಹಳ್ಳಿ: ಲಿಂಗದಹಳ್ಳಿ-ತಣಿಗೆಬೈಲು ಮುಖ್ಯ ರಸ್ತೆಯಲ್ಲಿದ್ದ ಗುಂಡಿಗಳನ್ನು ಪಿಡಬ್ಲುೃಡಿ ಮುಚ್ಚುವ ಮೂಲಕ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ.

ಗುಂಡಿಗಳ ಸಮಸ್ಯೆಗಳ ಕುರಿತು ರಸ್ತೆ ಗುಂಡಿ ಮುಚ್ಚದ ಪಿಡಬ್ಲುೃಡಿ ಶೀರ್ಷಿಕೆ ಅಡಿಯಲ್ಲಿ ಡಿ.12ರಂದು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಗೆ ಸ್ಪಂದಿಸಿದ ತರೀಕೆರೆ ಉಪವಿಭಾಗದ ಲೋಕೋಪಯೋಗಿ ಇಲಾಖೆ ಗುಂಡಿಗಳನ್ನು ಮುಚ್ಚುತ್ತಿದೆ. ಕೃಷ್ಣಾಪುರ, ಬಳ್ಳಾವರ, ಕಲ್ಲತ್ತಿಪುರ, ನಂದಿಬಟ್ಟಲು, ತಣಿಗೆಬೈಲು ಭಾಗದ ಗ್ರಾಮಸ್ಥರು ಪತ್ರಿಕೆ ಮೂಲಕ ಪಿಡಬ್ಲುೃಡಿ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಪತ್ರಿಕೆಗಳು ವಿಪಕ್ಷಗಳಿಗಿಂತ ಹೆಚ್ಚಾಗಿ ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡುತ್ತಿವೆ. ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕೊಡಿಸುತ್ತಿವೆ ಎಂದು ಕಲ್ಲತ್ತಿಪುರ ಗ್ರಾಮದ ಅಬುಬಕರ್ ಹೇಳಿದ್ದಾರೆ.