ಜಿಲ್ಲೆ

ರಸ್ತೆ ಕಾಮಗಾರಿಗೆ ಭೂಮಿಪೂಜೆ

ಭಟ್ಕಳ: ತಾಲೂಕಿನ ವಿವಿಧ ಗ್ರಾಮಗಳ ರಸ್ತೆ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಭಾನುವಾರ ಭೂಮಿಪೂಜೆ ನೆವೇರಿಸಿದರು. ತಾಲೂಕಿನ ಬೆಂಗ್ರೆ ಪಂಚಾಯಿತಿ ಕೇಸುಮನೆ- ತಟ್ಟಿಹಕ್ಕಲ್ ರಸ್ತೆ ನಿರ್ವಣಕ್ಕೆ ಅಂದಾಜು ಮೊತ್ತ 60 ಲಕ್ಷ ರೂಪಾಯಿ, ಬೆಂಗ್ರೆ ಪಂಚಾಯಿತಿ ವ್ಯಾಪ್ತಿಯ ಕೋಗ್ತಿ ರಸ್ತೆ ಕಾಮಗಾರಿಗೆ 25 ಲಕ್ಷ ರೂ., ಮಾವಳ್ಳಿ 1 ಗ್ರಾಮದ ನೆರಿಕುಳಿ ರಸ್ತೆ ಕಾಮಗಾರಿಗೆ 25 ಲಕ್ಷ ರೂ., ಮಾವಳ್ಳಿ 1 ಗ್ರಾಮದ ಗುಡಿಗಾರ್ ಬೋಳೆ ರಸ್ತೆ ಕಾಮಗಾರಿಗೆ 5 ಲಕ್ಷ ರೂ., ಮಾವಳ್ಳಿ 1 ನ್ಯಾಶನಲ್ ಕಾಲನಿಯಿಂದ ತುದಳ್ಳಿ ರಸ್ತೆ ಕಾಮಗಾರಿಗೆ 15 ಲಕ್ಷ ರೂ. ಹಾಗೂ ಬೈಲೂರು ಪಂಚಾಯಿತಿ ವ್ಯಾಪ್ತಿಯಲ್ಲಿ 20 ಲಕ್ಷ ರೂಪಾಯಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಈ ವೇಳೆ ಬಿಜೆಪಿ ಪಧಾಧಿಕಾರಿಗಳು, ಊರಿನ ಪ್ರಮುಖರು ಇದ್ದರು.

ಸಾಮಗ್ರಿ ಕಿಟ್: ಲಾಕ್​ಡೌನ್​ನಿಂದ ಸಂಕಷ್ಟಕ್ಕೊಳಗಾದ ತಾಲೂಕಿನ ಟೆಂಪೊ ಚಾಲಕರಿಗೆ ಕಾರ್ವಿುಕ ಇಲಾಖೆ ವತಿಯಿಂದ ಆಹಾರ ಸಾಮಗ್ರಿಗಳ ದಿನಸಿ ಕಿಟ್​ಗಳನ್ನು ಇಲ್ಲಿನ ಆಸರಕೇರಿ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಶಾಸಕ ಸುನೀಲ ನಾಯ್ಕ ವಿತರಿಸಿದರು.

ಅದೇ ರೀತಿ ಮಡಿವಾಳ ಸಮಾಜದ ಸಭಾಭವನದ ಸ್ಥಳಕ್ಕೆ ಭೇಟಿ ನೀಡಿ ಅವಶ್ಯವಿರುವ ಕಾಲುದಾರಿಯ ಕಾಮಗಾರಿಯನ್ನು ಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.