ಅರಕಲಗೂಡು: ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನಡೆಸಿ ಚಾಲನೆ ನೀಡಿದ ಬಳಿಕ ಅನುಮೋದನೆಗೆ ಸಭೆಯ ಮುಂದೆ ಇಟ್ಟಿರುವ ಕುರಿತು ಶುಕ್ರವಾರ ನಡೆದ ಪಪಂ ವಿಶೇ? ಸಭೆಯಲ್ಲಿ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.
ಪ.ಪಂ ಅಧ್ಯಕ್ಷೆ ಶಾರದಾ ಪೃಥ್ವಿರಾಜ್ ಅಧ್ಯಕ್ಷತೆಯಲ್ಲಿ ವಿಶೇ? ಸಭೆ ಶುಕ್ರವಾರ ನಡೆಯಿತು. ನ್ಯಾಯಾಲಯದ ಆವರಣದಲ್ಲಿ 7.65 ಲಕ್ಷ ರೂ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲು ಕಾಮಗಾರಿಗೆ ಅನುಮೋದನೆ ನೀಡುವಂತೆ ಸಭೆಯಲ್ಲಿ ಮಂಡಿಸಲಾಯಿತು. ಸದಸ್ಯ ರಮೇಶ್ ವಾಟಾಳ್ ಡಿ. 2 ರಂದು ಅಧ್ಯಕ್ಷರು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಡಿ. 9 ರ ಸಭೆಯಲ್ಲಿ ಕಾಮಗಾರಿಗೆ ಅನುಮೊದನೆ ನೀಡುವಂತೆ ಕೋರ ಲಾಗುತ್ತಿದೆ. ಆರಂಭಗೊಂಡಿರುವ ಕಾಮಗಾರಿಗೆ ಅನುಮೋದನೆಯಾದರೂ ಏಕೆ ಬೇಕು ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿ, ಈ ನಡೆ ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯರಾದ ನಿಖಿಲ್ ಕುಮಾರ್ ಹಾಗೂ ಎಚ್.ಎಸ್.ರಶ್ಮಿ ಇದಕ್ಕೆ ಧ್ವನಿಗೂಡಿಸಿ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಹಲವು ದಿನಗಳಿಂದ ನೆನಗುದಿಗೆ ಬಿದ್ದು ಇದೇ ರೀತಿ ಬೇರೆ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಆಕ್ಷೇಪಿಸಿದರು.
ವಕೀಲರ ಭವನದ ಉದ್ಘಾಟನೆಗೆ ಹೈ ಕೋರ್ಟ್ ನ್ಯಾಯ ಮೂರ್ತಿಗಳು ಬರುತ್ತಿದ್ದು ರಸ್ತೆ ನಿರ್ಮಿಸಿ ಕೊಡುವಂತೆ ಕೋರಿದ ಹಿನ್ನೆಲೆಯಲ್ಲಿ ತುರ್ತಾಗಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಮುಖ್ಯಾಧಿಕಾರಿ ಶಿವಕುಮಾರ್ ಸಮಜಾಯಿಶಿ ನೀಡಿದರು.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ, ಗುಂಪಾಗಿ ತಿರುಗುವ ನಾಯಿಗಳು ಸಾಕು ಪ್ರಾಣಿಗಳು, ಮಕ್ಕಳು, ವೃದ್ಧರ ಮೇಲೆ ಮುಗಿ ಬೀಳುತ್ತಿವೆ. ಇದಕ್ಕೆ ಏನಾದರೂ ಪರಿಹಾರ ರೂಪಿಸುವಂತೆ ಸದಸ್ಯರು ಹರಿಹಾಯ್ದರು. ಬೀದಿ ನಾಯಿಗಳನ್ನು ಹಿಡಿದು ಪಶು ವೈದ್ಯರಿಂದ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸಿ ಮೂರು ದಿನ ಅವುಗಳ ಆರೋಗ್ಯ ಪಾಲನೆ ಮಾಡಿ ಯಾವ ಬಡಾವಣೆಯಿಂದ ಹಿಡಿದು ತರಲಾಗಿತ್ತೋ ಅಲ್ಲಿಗೆ ವಾಪಸ್ ಬಿಟ್ಟು ಬರಬೇಕು ಎಂದು ಕಾನೂನಿನ ನಿಯಮ ಹೇಳುತ್ತದೆ, ಇದರ ಪಾಲನೆ ಕ?್ಟ ಸಾಧ್ಯವಾಗಿದೆ ಎಂದು ಮುಖ್ಯಾಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ರಸ್ತೆ ಒತ್ತುವರಿ ಮಾಡಿ ಮನೆ ನಿರ್ಮಿಸುತ್ತಿರುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯೆ ಅನು?ಾ ಆರೋಪಿಸಿ ಕ್ರಮಕ್ಕೆ ಆಗ್ರಹಿಸಿದರು. ಸದಸ್ಯರು ದೂರು ನೀಡಿದ ಕೂಡಲೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕ್ರಮ ಜರುಗಿಸಿದರೆ ಬಹಳ?್ಟು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಸದಸ್ಯೆ ರಶ್ಮಿ ಆಗ್ರಹಿಸಿದರು.
ಪಪಂ ಉಪಾಧ್ಯಕ್ಷೆ ಲಕ್ಷ್ಮಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೃ?್ಣಯ್ಯ ಇದ್ದರು.