ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ
ತಾಲೂಕಿನ ಬಹುತೇಕ ರಸ್ತೆಗಳು ಹದಗೆಟ್ಟಿದ್ದು, ವಾಹನ ಸವಾರರು ನಿತ್ಯ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾದ ಸ್ಥಿತಿ ನಿರ್ವಣವಾಗಿದೆ. ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆಗಳು ಸಂಪೂರ್ಣ ಹಾಳಾಗಿ ವರ್ಷಗಳೇ ಕಳೆದಿವೆ. ಜಿಲ್ಲೆಯವರೇ ಲೋಕೋಪಯೋಗಿ ಸಚಿವರಾಗಿದ್ದರೂ ರಸ್ತೆಗಳ ಅಭಿವೃದ್ಧಿ ಆಗದಿರá-ವುದಕ್ಕೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ನಿರಂತರವಾಗಿ ಸುರಿದ ಮಳೆ, ನಿಯಮ ಗಾಳಿಗೆ ತೂರಿ ಸಂಚರಿಸುವ ಮರಳು, ಎಂ. ಸ್ಯಾಂಡ್ ಸಾಗಿಸುವ ವಾಹನಗಳ ಅಬ್ಬರದ ಸಂಚಾರ ಮತ್ತು ನಿರ್ವಹಣೆ ಕೊರತೆಯಿಂದ ತಾಲೂಕಿನ ಬಹುತೇಕ ರಸ್ತೆಗಳ ಸ್ಥಿತಿ ಅಯೋಮಯವಾಗಿವೆ.
ಮುಖ್ಯವಾಗಿ ಗದಗ- ಲಕ್ಷೆ್ಮೕಶ್ವರ ಸಂರ್ಪಸುವ ರಾಜ್ಯ ಹೆದ್ದಾರಿ, ಲಕ್ಷೆ್ಮೕಶ್ವರ- ದೇವಿಹಾಳ, ಸೂರಣಗಿ- ಬೆಳ್ಳಟ್ಟಿ, ಸೂರಣಗಿ- ಬಾಲೆಹೊಸೂರ, ಲಕ್ಷೆ್ಮೕಶ್ವರ -ನೆಲೂಗಲ್, ಸೂರಣಗಿ-ಅಂಕಲಿ, ಗೋನಾಳ- ಶಿಗ್ಲಿ, ಶಿಗ್ಲಿ- ಹೂವಿನಶಿಗ್ಲಿ, ಶಿಗ್ಲಿ- ಕಡಕೋಳ, ಲಕ್ಷೆ್ಮೕಶ್ವರ -ಯತ್ನಳ್ಳಿ, ಮಾಗಡಿ- ಯಳವತ್ತಿ, ಲಕ್ಷೆ್ಮೕಶ್ವರ -ಗುಂಜಳ, ಲಕ್ಷೆ್ಮೕಶ್ವರ -ದೊಡ್ಡೂರ, ಲಕ್ಷೆ್ಮೕಶ್ವರ - ಅಕ್ಕಿಗುಂದ ಸೇರಿ ಜಿಲ್ಲಾ ಮುಖ್ಯ ರಸ್ತೆಗಳು, ಜಿಪಂ ಇಲಾಖೆ ರಸ್ತೆಗಳು, ಗ್ರಾಮೀಣ ಮತ್ತು ಹೊಲಗಳ ಸಂಪರ್ಕ ರಸ್ತೆಗಳೆಲ್ಲವೂ ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ.
ಕೆಲ ರಸ್ತೆಗಳಲ್ಲಿನ ಡಾಂಬರ್ ಕಿತ್ತು ಮೊಣಕಾಲುದ್ದ ಗುಂಡಿಗಳು ಬಿದ್ದಿವೆ. ಇಲ್ಲಿನ ರಸ್ತೆಗಳ ಬಗ್ಗೆ ಮಾಹಿತಿ ಇರದ ಹೊರ ಜಿಲ್ಲೆ ಮತ್ತು ರಾಜ್ಯದ ಚಾಲಕರು ವಾಹನ ಚಲಾಯಿಸುವಾಗ ಗುಂಡಿಗೆ ಬಿದ್ದು ವಾಹನ ಜಖಂ ಆಗುವುದು, ಪಂಕ್ಚರ್ ಆಗುವುದು ಸಾಮಾನ್ಯವಾಗಿದೆ. ಬೈಕ್ ಸವಾರರು ಗುಂಡಿಗೆ ಬಿದ್ದು ಆಸ್ಪತ್ರೆ ಸೇರುವುದು, ತಂಟೆ-ತಕರಾರು ತೆಗೆಯá-ವುದು ನಿತ್ಯ ಸಾಮಾನ್ಯವಾಗಿದೆ. ಹಾಳಾದ ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ಕೊಂಚ ಮೈ ಮರೆತರೂ ಅಪಾಯ ತಪ್ಪಿದ್ದಲ್ಲ ಎಂಬಂತಾಗಿದೆ.
ಅಡರಕಟ್ಟಿಯಿಂದ ಬಡ್ನಿ-ಆದ್ರಳ್ಳಿ ರಸ್ತೆ ಸಂಪೂರ್ಣ ಹಾಳಾಗಿದ್ದುದ್ದರಿಂದ ಕಳೆದ 2 ತಿಂಗಳಿಂದ ಈ ಮಾರ್ಗವಾಗಿ ಬಸ್ ಸಂಚಾರ ಅಸ್ತವ್ಯಸ್ತಗೊಂಡಿದೆ. ಮೊದಲು ನಿತ್ಯ 6 ಬಸ್ ಓಡಿಸಲಾಗá-ತ್ತಿತ್ತು. ಈಗ 3 ಬಸ್ಗಳನ್ನು ಓಡಿಸಲಾಗá-ತ್ತಿದೆ. ಗುತ್ತಲ- ಹೊಸರಿತ್ತಿ ಮಾರ್ಗದ ಬಸ್ ಸಂಚಾರದಲ್ಲೂ ಏರುಪೇರಾಗಿದೆ. ಹದಗೆಟ್ಟಿರುವ ರಸ್ತೆಗಳಿಂದ ನಿತ್ಯ ಅಲ್ಲಲ್ಲಿ ಬಸ್ಗಳು ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಸಂಬಂಧಿಸಿದವರು ಈಗಲಾದರೂ ನಿಯಮ ಮೀರಿ ಸಂಚರಿಸುವ ಟಿಪ್ಪರ್-ಲಾರಿಗಳ ಅಬ್ಬರಕ್ಕೆ ಬ್ರೇಕ್ ಹಾಕಬೇಕು ಎಂಬá-ದು ಜನರ ಆಗ್ರಹವಾಗಿದೆ.
ಪ್ರಸಕ್ತ ವರ್ಷದ ಮುಂಗಾರು ಮಳೆಯಿಂದ ತಾಲೂಕಿನಲ್ಲಿನ ಭಾಗಶಃ ರಸ್ತೆಗಳ ಸ್ಥಿತಿ ಹದಗೆಟ್ಟಿರುವ ಬಗ್ಗೆ ಇಲಾಖೆಗೆ ಪೂರ್ಣ ಮಾಹಿತಿಯೊಂದಿಗೆ ಕ್ರಿಯಾಯೋಜನೆ ಕಳá-ಹಿಸಲಾಗಿದೆ. ಮಳೆ ಮತ್ತು ಅತಿ ಭಾರವಾದ ವಾಹನಗಳ ಸಂಚಾರದಿಂದ ತೀರಾ ಹದಗೆಟ್ಟ ರಸ್ತೆಗಳಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಕೆಲವು ರಸ್ತೆಗಳಿಗೆ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದರೆ ಕೆಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯಲಿವೆ. ಮಳೆಗಾಲದ ಬಿಡುವು ನೋಡಿಕೊಂಡು ಕಾಮಗಾರಿ ಆರಂಭಕ್ಕೆ ಕಾರ್ಯಾದೇಶ ನೀಡಲಾಗುವುದು.ಮನೋಹರ ರಾಠೋಡ ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್