ಜಿಲ್ಲೆ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಕಿಕ್ಕೇರಿ: ಸಮೀಪದ ಮಾಕವಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಶಾಸಕ ಎಚ್.ಟಿ.ಮಂಜು ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಎಚ್.ಟಿ.ಮಂಜು, ರಸ್ತೆಗಳು ಗ್ರಾಮಗಳನ್ನು ಬೆಸೆಯುವ ಸಂರ್ಪಕ ಸೇತುವೆಯಾಗಿವೆ. ಲೋಕೋಪಯೋಗಿ ಇಲಾಖೆಯಿಂದ 5ಕೋಟಿ.ರೂ.ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲು ಗುತ್ತಿಗೆದಾರರು ಮುಂದಾಗಬೇಕಿದೆ ಎಂದರು.

ರಸ್ತೆ ಹದಗೆಟ್ಟರೆ ಗ್ರಾಮದ ಜನತೆಯ ಬದುಕು ಹಾಳಾದಂತೆ. ಗುಣಮಟ್ಟದ ಕಾಮಗಾರಿಗಾಗಿ ಗ್ರಾಮಸ್ಥರೇ ಉಸ್ತುವಾರಿ ವಹಿಸಿ ರಸ್ತೆ ಗುಣಮಟ್ಟವಿರಲು ಎಚ್ಚರಿಕೆ ವಹಿಸಲಿ ಎಂದರು.

ಕಸಬಾ ಜೆಡಿಎಸ್ ಅಧ್ಯಕ್ಷ ವಸಂತ್ ಕುಮಾರ್, ಪಿಡಿಒ ಶೈಲಜಾ, ಡಿ.ಮಂಜುನಾಥ್, ಗ್ರಾಪಂ ಸದಸ್ಯರಾದ ಮಂಜೇಗೌಡ, ಕಾಯಿ ಮಂಜು, ಮಾಜಿ ಅಧ್ಯಕ್ಷ ಬಲರಾಮೇಗೌಡ, ಮುಖಂಡರಾದ ಕೃಷ್ಣೇಗೌಡ, ಮಿಲ್ ಯೋಗೇಶ್, ಪ್ರದೀಪ್, ಲೋಕೇಶ್, ವಿಶ್ವನಾಥ್, ಚಲುವರಾಜು, ಸಂತೋಷ್, ಹೆಗ್ಗಡಹಳ್ಳಿ ಅಲೋಕ್, ಮಧು, ಚಲುವರಾಜು, ಗುತ್ತಿಗೆದಾರ ರಾಜೇನಹಳ್ಳಿ ರೇವಣ್ಣ, ವಡ್ಡರಹಳ್ಳಿ ಮಂಜು, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಮತ್ತಿತರರಿದ್ದರು.