ಜಿಲ್ಲೆ

ರಸ್ತೆ ಅಪಘಾತದಲ್ಲಿ 9 ದನಗಳ ಸಾವು

ಚಿತ್ರದುರ್ಗ: ದನಗಳನ್ನು ಸಾಗಿಸುತ್ತಿದ್ದ ಲಾರಿ ಅಪಘಾತವಾಗಿ ಏಳು ದನಗಳು ಸ್ಥಳದಲ್ಲೇ ಅಸು ನೀಗಿದ ಘಟನೆ ಹಿರಿಯೂರು ತಾಲೂಕು ರಾಷ್ಟ್ರೀ ಯ ಹೆದ್ದಾರಿ 48ರ ಕೆಆರ್‌ಹಳ್ಳಿ ಗೇಟ್ ಬಳಿ ನಡೆದಿದೆ.

ಮಹಾರಾಷ್ಟ್ರದಿಂದ ಕೋಲಾರ ಕಡೆಗೆ ಹೋಗುತ್ತಿದ್ದ ಲಾರಿ ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಲಾರಿಯಲ್ಲಿದ್ದ 10 ದನಗಳ ಪೈಕಿ 9 ದನಗಳು ಸ್ಥಳದಲ್ಲೇ ಮೃತಪಟ್ಟಿವೆ. ಚಾಲಕರಿಬ್ಬರು ಗಂಭೀರವಾಗಿ ಗಾಯಗೊಂಡಿ ದ್ದಾರೆ. ದನಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು,ತನಿಖೆಯಿಂದ ಸ್ಪಷ್ಟ ಮಾಹಿತಿ ಹೊರಬೀಳ ಬೇಗಿದೆ. ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.