ಜಿಲ್ಲೆ

ರಸ್ತೆ ಅಪಘಾತ ಬ್ಯಾಂಕ್ ಉದ್ಯೋಗಿ ಸಾವು

ಅಭಿನಯ್ ಎಚ್.ಎಂ

ಕೊಡಗು : ಗೋಣಿಕೊಪ : ಕೊಡಗು ಅಮ್ಮತ್ತಿ-ವಿರಾಜಪೇಟೆ ನಡುವೆ ಸುಂಕದ ಕಟ್ಟೆ ಬಳಿ ನಡೆದ ಬೈಕ್ ಮತ್ತು ಸ್ಕೂಟಿ ಅಪಘಾತದಲ್ಲಿ ಬ್ಯಾಕ್ ಉದ್ಯೋಗಿ ಅಮೃತ ತೀವ್ರಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.


ಕೇರಳದ ತ್ರಿಶೂರುವಿನ ಅಮೃತ(24) ಮೃತರು. ಅಮ್ಮತ್ತಿ ಕೆನರಾ ಬ್ಯಾಂಕ್‌ನಲ್ಲಿ ಒಂದು ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು, ವಿರಾಜಪೇಟೆಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಶುಕ್ರವಾರ ಸಂಜೆ ಕೆಲಸ ಮುಗಿಸಿ ತೆರಳುವ ಸಂದರ್ಭ ಸಂಜೆ 7.30ರ ಸಮಯದಲ್ಲಿ ಘಟನೆ ನಡೆದಿದೆ.
ವಿರಾಜಪೇಟೆಯಿಂದ ವೇಗವಾಗಿ ಬಂದ ಬೈಕ್ ಸವಾರ ಬಿಳುಗುಂದ ನಿವಾಸಿ ವಿಠಲ್ ಸ್ಕೂಟರ್‌ಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದಾನೆ. ವಿಠಲ್‌ಗೂ ತೀವ್ರ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.