ಜಿಲ್ಲೆ

ರಸ್ತೆ ಅತಿಕ್ರಮಣ ತೆರವು

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಅಮರಗೋಳ ಫ್ಲೋರಾ ಪಾರ್ಕ್ ರಸ್ತೆ ಅತಿಕ್ರಮಣವನ್ನು ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ಸೋಮವಾರ ಬೆಳಗ್ಗೆ ತೆರವುಗೊಳಿಸಿದರು.

ರಸ್ತೆ ಅತಿಕ್ರಮಿಸಿದ್ದ 2 ಗೂಡಂಗಡಿಯನ್ನು ತೆರವುಗೊಳಿಸಲಾಯಿತು. 5 ಗ್ರಾನೈಟ್ಸ್ ಮಾರಾಟಗಾರರು ರಸ್ತೆ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಗ್ರಾನೈಟ್ಸ್ ದಾಸ್ತಾನು ಮಾಡಿದ್ದರು ಹಾಗೂ ನಾಮಫಲಕಗಳನ್ನು ರಸ್ತೆಯಲ್ಲಿ ಅಳವಡಿಸಿದ್ದರು. ಗ್ರಾನೈಟ್ಸ್ ಹಾಗೂ ನಾಮಫಲಕಗಳನ್ನು ಖುಲ್ಲಾ ಪಡಿಸಿದರು.

ಪಾಲಿಕೆ ವಲಯ ಕಚೇರಿ ಸಹಾಯಕ ಆಯುಕ್ತ ರಮೇಶ ನೂಲ್ವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಎಇಇ ಮಂಜುನಾಥ ಹಿರೇಮಠ, ಎಇ ಶೃತಿ, ಮಲ್ಲಿಕಾರ್ಜುನ, ಇತರರು ಇದ್ದರು.