ಜಿಲ್ಲೆ

ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಣೆ

ಚಿತ್ರದುರ್ಗ: ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶನಿವಾರ ನಡೆದ ಜಿಲ್ಲಾಮಟ್ಟದ ಕನ್ನಡ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜ್ಞಾನಭಾರತಿ ವಿದ್ಯಾಮಂದಿರದ ಜಿ.ಡಿ.ಅನನ್ಯ, ಚಂದ್ರು ಪ್ರಥಮ ಸ್ಥಾನ-5ಸಾವಿರ ರೂ., ಹೊಳಲ್ಕೆರೆಯ ವಾಗ್ದೇವಿ ಶಾಲೆಯ ಪ್ರೀತಮ್, ಅಕ್ಮಲ್ ದ್ವೀತಿಯ-3ಸಾವಿರ ರೂ., ಚಳ್ಳಕೆರೆಯ ವೇದ ಶಾಲೆಯ ಸಂಜಯ್, ಶ್ರೀರಂಗ ತೃತೀಯ-2ಸಾವಿರ ರೂ. ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಪಡೆದರು.

ಬಾಲಕಿಯರ ಸರ್ಕಾರಿ ಜೂನಿಯರ್ ಕಾಲೇಜಿನ (ಪ್ರೌಢಶಾಲೆ ವಿಭಾಗ) ನಾಲ್ಕನೇ ಸ್ಥಾನ ಪಡೆದುಕೊಂಡಿತು. ಮಾಸ್ಟರ್ ಟಿ.ರಮೇಶ್ ರಸಪ್ರಶ್ನೆ ನಡೆಸಿಕೊಟ್ಟರು.

ಶಾಲೆಯ ಅಧ್ಯಕ್ಷ ಎಸ್.ಭಾಸ್ಕರ್, ಕಾರ್ಯದರ್ಶಿ ಎಸ್.ಬಿ.ರಕ್ಷಣ್, ಪ್ರಾಚಾರ್ಯ ಸಿ.ಡಿ.ಸಂಪತ್‌ಕುಮಾರ್, ಮುಖ್ಯ ಶಿಕ್ಷಕ ವೆಂಕಟೇಶ್, ಹೆಡ್ ಕೋ ಆರ್ಡಿನೇಟರ್ ಕೆ.ಬಸವರಾಜು, ಶಿಕ್ಷಕಿಯರಾದ ಪುಷ್ಪಾಂಜಲಿ, ಪವಿತ್ರಾ, ಶರತ್ ಇತರರಿದ್ದರು.