ಹಾಸನ: ರವೀಂದ್ರ ನಗರದ ರಾಮಕೃಷ್ಣ ವಿದ್ಯಾಲಯದಲ್ಲಿ ಸಂಸ್ಕಾರ ಭಾರತಿ, ಜಿಲ್ಲಾ ಗಮಕ ಕಲಾ ಪರಿಷತ್ ವತಿಯಿಂದ ಪಠ್ಯಧಾರಿತ ಗಮಕ ಪ್ರಾತ್ಯಕ್ಷಿಕೆ ಹಾಗು ಗುರುವಂದನಾ ಸಮಾರಂಭವನ್ನು ಇತ್ತೀಚೆಗೆ ಹಮಿಕೊಳ್ಳಲಾಗಿತ್ತು.
10ನೇ ತರಗತಿ ಕನ್ನಡ ಪಠ್ಯದ ಮಹಾಕವಿ ಕುಮಾರವ್ಯಾಸ ವಿರಚಿತ ಕೌರವೇಂದ್ರನ ಕೊಂದೆ ನೀನು ಎಂಬ ಕಾವ್ಯ ಭಾಗದ ವಾಖ್ಯಾನ ನಡೆಯಿತು.
ಗಮಕ ಕಲಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಗಣೇಶ್ ಉಡುಪ ಅವರು ಕಾವ್ಯ ವಾಚನ ಮಾಡಿದರು. ವಿಶ್ರಾಂತ ಪ್ರಾಚಾರ್ಯ ಜಿ.ಎನ್.ಅನುಸೂಯ ಅವರು ವ್ಯಾಖ್ಯಾನ ಮಾಡಿದರು. ಭರತನಾಟ್ಯ ಕಲಾವಿದೆ ಕೆ.ಎಸ್.ಅಂಬಳೆ ರಾಜೇಶ್ವರಿ ಅವರಿಗೆ ಭರತನಾಟ್ಯ ದುರಂಧರೆ ಬಿರುದು ನೀಡಿ ಗೌರವಿಸಲಾಯಿತು. ಕಲಾವಿದ ಡಾ.ಕೆ.ಎನ್.ಶಂಕರಪ್ಪ ಅವರಿಗೆ ಕುಂಚಕಲಾ ನಿಪುಣ ಪ್ರಶಸ್ತಿ ನೀಡಲಾಯಿತು. ದೇವಿಕಾ ರಾಜಮಣಿಗೌಡ ಅವರ ದೀಪಾರತಿ ನೃತ್ಯ ಗಮನ ಸೆಳೆಯಿತು.
ಸಂಸ್ಕಾರ ಭಾರತಿ ಜಿಲ್ಲಾ ಗೌರವ ಅಧ್ಯಕ್ಷ ವಿಶ್ವನಾಥರಾವ್ ಚವ್ಹಾಣ್, ವೇದಾ ಶಿವಕುಮಾರ್, ಶಿಕ್ಷಕಿ ಶಾಂತಾ, ಶ್ವೇತಾ ಮೋಹನ್, ಪ್ರೊ.ಜಿ.ಎನ್.ಅನಸೂಯ ಹಾಗು ಇತರರಿದ್ದರು.