ಜಿಲ್ಲೆ

ರಮೇಶ್ ಹಂಡ್ರಗಿಗೆ ಶ್ರದ್ಧಾಂಜಲಿ

ಹಾಸನ: ಪತ್ರಕರ್ತ ರಮೇಶ್ ಹಂಡ್ರಗಿ ಅವರ ಅಕಾಲಿಕ ನಿಧನಕ್ಕೆ ಶನಿವಾರ ಹಾಸನ ಜಿಲ್ಲಾ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಸಂಘದ ಸದಸ್ಯರು, ಹಿರಿಯ ಹಾಗೂ ಕಿರಿಯ ಪತ್ರಕರ್ತರು, ಸಂಪಾದಕರು ಇತರರು ಭಾಗವಹಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ರಮೇಶ್ ಹಂಡ್ರಗಿ ಉತ್ತಮ ಬರಹಗಾರರಾಗಿ, ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಸ್ನೇಹಜೀವಿ, ಅಪಾರ ಸ್ನೇಹ ಬಳಗವನ್ನು ಹೊಂದಿದ್ದ ಸಹದ್ಯೋಗಿಯ ನಿಧನದ ಸುದ್ದಿ ಸಾಕಷ್ಟು ದುಃಖತರಿಸಿದೆ. ಮೃತರ ಕುಟುಂಬ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಹಿರಿಯರು ಹೇಳಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್, ಪದಾಧಿಕಾರಿಗಳಾದ ಶ್ರೀನಿವಾಸ್, ಸಂತೋಷ್, ಕುಮಾರ್ ಇತರರಿದ್ದರು.