ರಮೇಶ ಕತ್ತಿ ಮನೆಗೆ ಪೊಲೀಸರು ಭೇಟಿ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ವಾಲ್ಮೀಕಿ ಸಮಾಜದ ಕುರಿತು ಅವಹೇಳನ ಹೇಳಿಕೆ ನೀಡಿದ ಆರೋಪ ಹಿನ್ನಲೆ ಮಾಜಿ ಸಂಸದ ರಮೇಶ ಕತ್ತಿ ಮನೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ವಿಭಾಗದ ಪೊಲೀಸರು ಮಂಗಳವಾರ ಭೇಟಿ ನೀಡಿದರು.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ರಮೇಶ ಕತ್ತಿ ಮನೆಗೆ ಧ್ವನಿ ಪರೀಕ್ಷೆಗೆ ಸಿ ಆರ್ ಸೆಲ್ ವಿಭಾಗದ ಎಸ್ ಪಿ ರವೀಂದ್ರ ಗಡಾದೆ ನೇತೃತ್ವದಲ್ಲಿ ಭೇಟಿ ನೀಡಿದ ಪೊಲೀಸರು
ರಮೇಶ ಕತ್ತಿ ಮನೆಯಲ್ಲಿ ಇಲ್ಲದ ಕಾರಣ ವಿಚಾರಣೆಗೆ ಹಾಜರಾಗುವಂತೆ ಕುಟುಂಬಸ್ಥರಿಗೆ ತಿಳಿಸಿ
ವಾಪಸು ತೆರಳಿದ್ದರು.
ಡಿಸಿಸಿ ಬ್ಯಾಂಕ್ ಚುನಾವಣಾ ಫಲಿತಾಂಶ ದಿನದಂದು ವಾಲ್ಮೀಕಿ ಸಮಾಜದ ಕುರಿತು ಅವಹೇಳನಕಾರಿ ಮಾತುಗಳಾಡಿದ ಆರೋಪದ ಕುರಿತು
ರಮೇಶ ಕತ್ತಿ ವಿರುದ್ಧ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.