ಬೆಳಗಾವಿ ಮರಾಠ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೈವ ಸಹಕಾರಿ ಬ್ಯಾಂಕ್​ನ ಸುವರ್ಣ ಮಹೋತ್ಸವ ಸಮಾರಂಭವನ್ನು ಮಾಜಿ ರೈಲ್ವೆ ಸಚಿವ ಸುರೇಶ ಪ್ರಭು ಉದ್ಘಾಟಿಸಿದರು. ಉದಯಶಂಕರ ಭಟ್​, ದಯಾನಂದ ನೆಟಾಳ್ಕರ್​, ಮಂಜುನಾಥ ಶೇಟ್​, ರಾಜೇಶ್​ ಅಣ್ವೇಕರ, ಸಚಿನ್​ ಸಬ್ನಿಸ್​, ಸದಾನಂದ ರೇವಣಕರ, ಜೀವನ ವೇರ್ಣೆಕರ್​ ಇತರರಿದ್ದರು. 
ಜಿಲ್ಲೆ

ರಫ್ತಿನಲ್ಲಿ ಅಕ್ಕಸಾಲಿಗರ ಕೊಡುಗೆ ಅಪಾರ

ಬೆಳಗಾವಿ: ದೇಶದ ರಫ್ತಿನಲ್ಲಿ ಅಕ್ಕಸಾಲಿಗರ ಕೊಡುಗೆ ಅಪಾರ. ಭವಿಷ್ಯ ಹೇಳುವ ಸಮುದಾಯದಲ್ಲಿ ಚಿನ್ನಾಭರಣ ಮಾಡುವ ಅನೇಕ ಸಭೆಗಳಿವೆ. ಪೀಳಿಗೆಯಿಂದ ಪೀಳಿಗೆಗೆ ದೈವ ಸಮುದಾಯದವರು ಆಭರಣ ವ್ಯಾಪಾರ ಮಾಡುತ್ತಿದ್ದಾರೆ. ಅವರಿಂದ ಚಿನ್ನ ಪಡೆದು ಹಬ್ಬಗಳನ್ನು ಆಚರಿಸುತ್ತೇವೆ ಎಂದು ಮಾಜಿ ರೈಲ್ವೆ ಸಚಿವ ಸುರೇಶ ಪ್ರಭು ಹೇಳಿದರು.

ನಗರದ ಮರಾಠ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೈವ ಸಹಕಾರಿ ಬ್ಯಾಂಕ್​ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಹಿಂದೆ ಹಲವು ಬಾರಿ ಬೆಳಗಾವಿಗೆ ಬಂದಿದ್ದೇನೆ. ಇಲ್ಲಿನ ಜನರೊಂದಿಗೆ ನನಗೂ ಉತ್ತಮ ಬಾಂಧವ್ಯವಿದೆ. ಬ್ಯಾಂಕ್​ 50 ವರ್ಷ ಪೂರೈಸಿದೆ. ಇದೊಂದು ದೊಡ್ಡ ಹೆಜ್ಜೆ. ದೈವ ಸಮುದಾಯದ ಸಭೆಗಳು ಒಗ್ಗೂಡಿ ಈ ಸಂಸ್ಥೆಯನ್ನು ಸ್ಥಾಪಿಸಿರುವುದು ದೊಡ್ಡ ವಿಷಯ ಎಂದರು.
ಅಧ್ಯ ಉದಯಶಂಕರ ಭಟ್​ ಮಾತನಾಡಿ, ಬ್ಯಾಂಕ್​ನ್ನು 1974ರಲ್ಲಿ ಸ್ಥಾಪಿಸಲಾಯಿತು. ಬೆಳಗಾವಿಯಲ್ಲಿ 4 ಹಾಗೂ ಕಾರವಾರ, ಧಾರವಾಡದಲ್ಲಿ ಎರಡು ಶಾಖೆಗಳು. ಬ್ಯಾಂಕಿನಲ್ಲಿ ಹೊಸ ತಂತ್ರಾನ ಬಳಸಲಾಗಿದೆ. ಉತ್ತಮ ಗ್ರಾಹಕ ಸೇವೆ ಒದಗಿಸಲಾಗಿದೆ. 50 ವರ್ಷಗಳಲ್ಲಿ ಉತ್ತಮ ಕೆಲಸ ಮಾಡಿದೆ ಎಂದರು.

ದೈವ ಸೇವಾ ಸಂದ ಅಧ್ಯ ದಯಾನಂದ ನೆಟಾಳ್ಕರ್​, ಉಪಾಧ್ಯ ಮಂಜುನಾಥ ಶೇಟ್​, ರಾಜೇಶ್​ ಅಣ್ವೇಕರ, ಲಾಗು ಉದ್ಯೋಗ ಭಾರತಿ ಅಧ್ಯ, ಉದ್ಯಮಿ ಸಚಿನ್​ ಸಬ್ನಿಸ್​, ನಿರ್ದೇಶಕ ಸದಾನಂದ ರೇವಣಕರ, ಜೀವನ ವೇರ್ಣೆಕರ್​, ಕಲ್ಪನಾ ಅಣ್ವೇಕರ್​, ಸಮೀರ್​ ಅಣ್ವೇಕರ್​, ಮಾಣಿಕ ಅಣ್ವೇಕರ್​, ಗಣೇಶ ವೇರ್ಣೆಕರ, ವಿನಿತಾ ಶೇಟ್​, ರುನಾಥ ಶೇಜೆಖಾನ್​, ರಂಗನಾಥ ಸುಂಕ್ಸಾಲ್ಕರ್​, ಪದ್ಮನಾಭ ಶೇಟ್​ ಇತರರಿದ್ದರು.