ಬಾಗಲಕೋಟೆ: ಮುಧೋಳದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ರನ್ನ ವೈಭವ-೨೦೨೫ರ ಕಾರ್ಯಕ್ರಮದ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರನ್ನ ರಥಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಸೋಮವಾರ ಚಾಲನೆ ನೀಡಿದರು.
ಜಿಲ್ಲಾಡಳಿತ ಭವನದ ಮುಖ್ಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರನ್ನ ರಥಯಾತ್ರಗೆ ಪೂಜೆ ಸಲ್ಲಿಸಿ, ಚಾಲನೆ ನೀಡಿ ಮಾತನಾಡಿದ ಅವರು, ಕವಿ ಚಕ್ರವರ್ತಿ ರನ್ನನ ಗತವೈಭವ ಸಾರುವ ನಿಟ್ಟಿನಲ್ಲಿ ರಥಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಾ ಮಟ್ಟದ ರಥಯಾತ್ರೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ರಾಜ್ಯ ಮಟ್ಟದ ರಥಯಾತ್ರೆಗೆ ಫೆ.೧೯ ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ರನ್ನ ಕವಿಯ ಭಾವಚಿತ್ರ ಹೊತ್ತ ರಥ ನಗರದ ನಾನಾ ಕಡೆ ಸಂಚರಿಸಿತು. ವಿವಿಧ ಜಾನಪ ಕಲಾತಂಡಗಳು ಪಾಲ್ಗೊಂಡಿದ್ದವು. ಈ ಸಂದರ್ಭದಲ್ಲಿ ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾಽಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ, ಅಪರ ಜಿಲ್ಲಾಽಕಾರಿ ಪರಶುರಾಮ ಶಿನ್ನಾಳಕರ, ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ ಸೇರಿದಂತೆ ಜಿಲ್ಲಾ ಮಟ್ಟದ ಅಽಕಾರಿಗಳು, ಸಾರ್ವಜನಿಕರು ಹಾಗೂ ರನ್ನನ ಅಭಿಮಾನಿಗಳು ಪಾಲ್ಗೊಂಡಿದ್ದರು.
ರನ್ನ ರಥಯಾತ್ರೆ ಸೋಮವಾರ ಬಾಗಲಕೋಟೆ, ಬೇವಿನಮಟ್ಟಿ, ಶಿರೂರ, ಕಮತಗಿಯಲ್ಲಿ ಸಂಚರಿಸಿದರೆ, ಫೆ.೧೮ ರಂದು ಅಮೀನಗಡ, ಸುಳೇಭಾವಿ, ಗುಡೂರ, ಪಟ್ಟದಕಲ್ಲ, ನಂದಿಕೇಶ್ವರ, ರಾಘಾಪೂರ, ಗುಳೇದಗುಡ್ಡ, ಫೆ..೧೯ ರಂದು ಬಾದಾಮಿ, ಹಲಕುರ್ಕಿ ಕ್ರಾಸ್, ಕೆರೂರ, ಗದ್ದನಕೇರಿ, ಬೀಳಗಿ, ಫೆ.೨೦ ರಂದು ಬೀಳಗಿ, ಸಿದ್ದಾಪೂರ, ತೆಗ್ಗಿ, ಯಡಹಳ್ಳಿ, ಅಮಲಝರಿ, ಕೊಣ್ಣೂರ, ಹುಲ್ಯಾಳ. ಫೆ.೨೧ ರಂದು ಜಮಖಂಡಿ ಯಲ್ಲಟ್ಟಿ, ರಬಕವಿ-ಬನಹಟ್ಟಿ, ಹನಗಂಡಿ, ತೇರದಾಳ, ಗೊಲಭಾವಿ, ಚಿಮ್ಮಡ, ಮಹಾಲಿಂಗಪೂರ, ರನ್ನ ಬೆಳಗಲಿ ಹಾಗೂ ಮುಧೋಳದಲ್ಲಿ ಸಂಚರಿಸಲಿದೆ.