ಬಾಗಲಕೋಟೆ ಜಿಲ್ಲೆಯಾದ್ಯಂತ ರನ್ನ ರಥ ಯಾತ್ರೆಗೆ ಅದ್ದೂರಿ ಸ್ವಾಗತ ದೊರೆಯುತ್ತಿದೆ. 
ಜಿಲ್ಲೆ

ರನ್ನ ರಥಯಾತ್ರೆಗೆ ಎಲ್ಲೆಡೆ ಅದ್ದೂರಿ ಸ್ವಾಗತ

ಬಾಗಲಕೋಟೆ: ಜಿಲ್ಲೆಯ ಮುಧೋಳನಲ್ಲಿ ಫೆ.೨೨ ರಿಂದ ೨೪ ವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ರನ್ನ ವೈಭವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ರನ್ನ ರಥಯಾತ್ರೆಗೆ ವಿವಿಧೆಡೆ ಅದ್ಧೂರಿ ಸ್ವಾಗತ ದೊರೆಯುತ್ತಿದೆ.

ಈಗಾಗಲೇ ತಾಲೂಕಾ ಮಟ್ಟದ ಒಂದು ರಥ ಫೆ.೧೩ ರಂದು ರನ್ನ ಬೆಳಗಲಿಯಿಂದ ಚಾಲನೆಗೊಂಡಿದೆ. ಇನ್ನೊಂದು ರಥ ಫೆ.೧೭ ರಂದು ಬಾಗಲಕೋಟೆ ಜಿಲ್ಲಾಡಳಿತದ ಮುಖ್ಯ ಆವರಣದಿಂದ ಹೊರಟು ಜಿಲ್ಲೆಯಾದ್ಯಂತ ಪ್ರತಿಯೊಂದು ತಾಲೂಕುಗಳಿಗೆ ಸಂಚರಿಸಲಿದೆ. ಮತ್ತೊಂದು ರಥ ಫೆ.೧೯ ರಂದು ಬೆಂಗಳೂರಿನಿ0ದ ಚಾಲನೆ ದೊರೆತಿದ್ದು, ಈ ರಥ ಸಹ ಪ್ರಮುಖ ಜಿಲ್ಲಾ ಸ್ಥಳಗಳ ಮೂಲಕ ರಾಜ್ಯಾದ್ಯಂತ ಸಂಚರಿಸಿ ಕೊನೆ ಫೆ.೨೨ ರಂದು ರನ್ನ ಬೆಳಗಲಿಗೆ ಆಗಮಿಸಲಿದೆ.

ರನ್ನನ ಗತ ವೈಭವ ಸಾರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರತ್ಯೇಕ ಮೂರು ರಥ ಸಂಚರಿಸುತ್ತಿವೆ. ತಾಲೂಕಾ ಮಟ್ಟದಲ್ಲಿ ಪ್ರತಿಯೊಂದು ಗ್ರಾಮಗಳಿಗೆ ಆಗಮಿಸಿದಾಗ ಗ್ರಾಮದ ಮಹಿಳೆಯರು ಇಳಕಲ್ಲ ಸೀರೆ ಉಟ್ಟು ಕೈಯಲ್ಲಿ ಆರತಿ ಹಾಗೂ ಕುಂಬ ಹೊತ್ತುಕೊಂಡು ಅದ್ದೂರಿಯಾಗಿ ರಥವನ್ನು ಸ್ವಾಗತಿಸಿದರೆ, ಇನ್ನು ಪುರುಷರು ಫೇಟ ಸುತ್ತಿಕೊಂಡು ಹಾಗೂ ರನ್ನನ ಗಧ ಪ್ರದರ್ಶನ ಮಾಡುತ್ತಿರುವ ದೃಶ್ಯಗಳು ಕಂಡು ಬಂದವರು.

ತಾಲೂಕಾ ಮತ್ತು ಜಿಲ್ಲಾ ಮಟ್ಟದ ರಥ ಒಂದೇ ತರನಾಗಿದ್ದು, ರನ್ನನ ಮೂರ್ತಿ, ರನ್ನನ ಗ್ರಂಥ ಮತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರ ಸಹ ರಥದಲ್ಲಿ ಕಾಣಬಹುದಾಗಿದೆ. ರಾಜ್ಯ ಮಟ್ಟದ ರನ್ನನ ರಥ ದೊಡ್ಡ ಗಾತ್ರ ಹೊಂದಿದ್ದು, ಅದರಲ್ಲಿ ಜಿಲ್ಲೆಯ ಜನಪದ ಕಲೆ, ಕಲಾವಿದರು, ಸಾಹಿತಿಗಳು, ಅಮೃತೇಶ್ವರ ದೇವಸ್ಥಾನಗಳ ಭಾವಚಿತ್ರಗಳನ್ನು ಕಾಣಬಹುದಾಗಿದೆ.