ಲೋಕಾಪುರ ಸಮೀಪ ತಿಮ್ಮಾಪುರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯ ಬೀಳಗಿ ಶುರ‍್ಸ್ ಮಿಲ್ ಲಿಮಿಟಡ್ ಯುನಿಟ್-೨ ಬಾಯ್ಲರ್ ಪ್ರದೀಪನ ಸಮಾರಂಭಕ್ಕೆ ಮಾಜಿ ಸಚಿವ ಎಸ್.ಆರ್.ಪಾಟೀಲ ಚಾಲನೆ ನೀಡಿದರು. ಈ ವೇಳೆ ಎಚ್.ಎಲ್.ಪಾಟೀಲ, ಸುರೇಶಗೌಡ, ಮಂಜುನಾಥ ಅರಳಿಕಟ್ಟಿ, ರಾಹುಲಗೌಡ ನಾಡಗೌಡ ಇನ್ನಿತರರು ಇದ್ದರು.  
ಜಿಲ್ಲೆ

ರನ್ನ ಕಾರ್ಖಾನೆ ಕಬ್ಬು ನುರಿಸುವ ಹಂಗಾಮು ಆರಂಭ...!

ಸಂತೋಷ ದೇಶಪಾಂಡೆ

ಬಾಗಲಕೋಟೆ: ಜಿಲ್ಲೆಯ ಲೋಕಾಪುರ ಸಮೀಪ ತಿಮ್ಮಾಪುರದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಬೀಳಗಿ ಶುರ‍್ಸ್ ಮಿಲ್ ಲಿಮಿಟಡ್ ಯುನಿಟ್-೨ ಬಾಯ್ಲರ್ ಪ್ರದೀಪನ ಸಮಾರಂಭವು ಅದ್ದೂರಿಯಾಗಿ ಜರುಗಿತು.

ಮಾಜಿ ಸಚಿವ ಎಸ್.ಆರ್.ಪಾಟೀಲ ಕಾರ್ಖಾನೆಯು ೨೦೨೫-೨೬ ನೇ ಹಂಗಾಮಿನ ಬಾಯ್ಲರ್ ಪ್ರದೀಪನಾ ಸಮಾರಂಭದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ಮಾತನಾಡಿದರು. ಎಲ್ಲ ರೈತರ ಸದಸ್ಯರು ಕಬ್ಬು ಕಾರ್ಖಾನೆಗೆ ಕಳುಹಿಸುವಂತೆ ಮನವಿ ಮಾಡಿದರು. ಪ್ರಸಕ್ತ ಸಾಲಿನಲ್ಲಿ ೬ ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದರು.

ಈ ಗುರಿ ಸಾಽಸಲು ೧೨೦ ರಿಂದ ೧೫೦ ದಿನಗಳವರೆಗೆ ನಿರಂತರ ಕಬ್ಬು ನುರಿಸುವ ಅಗತ್ಯವಿದ್ದು, ಕಾರ್ಮಿಕರು ಹಗಲು ರಾತ್ರಿ ಶ್ರಮಿಸಬೇಕಾಗುತ್ತದೆ, ಅಗ್ರಿಕಲ್ಚರ್ ವಿಭಾಗದ ಅಽಕಾರಿಗಳು ಸ್ಥಳೀಯ ರೈತರಿಂದಲೇ ಹೆಚ್ಚಿನ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಪೂರೈಸುವಂತೆ ತಿಳಿಸಿದರು.

ನಿರ್ದೇಶಕ ಎಚ್.ಎಲ್.ಪಾಟೀಲ ಮಾತನಾಡಿ, ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಅನುಭವವಿರುವ, ಹಿರಿಯರು ಆದ ಎಸ್.ಆರ್.ಪಾಟೀಲ ನೇತೃತ್ವದಲ್ಲಿ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಮೊದಲಿನ ಗತವೈಭವ ಮರಳಲಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಕಳುಹಿಸಿ ಎಂದು ರೈತರಲ್ಲಿ ಕೋರಿ, ರೈತರ ಸಹಕಾರ ಕಾರ್ಮಿಕರ ದುಡಿಮೆಯಿಂದ ಈ ಕಾರ್ಖಾನೆಗೆ ದೊಡ್ಡದಾಗಿ ಬೆಳೆದು ರೈತರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ತಿಳಿಸಿದರು.

ನಿರ್ದೇಶಕರಾದ ಸುರೇಶಗೌಡ, ಲಕ್ಷ÷್ಮಣ ನಿರಾಣಿ, ಮಂಜುನಾಥ ಅರಳಿಕಟ್ಟಿ, ಆಡಳಿತಾಽಕಾರಿ ರಾಹುಲಗೌಡ ನಾಡಗೌಡ, ಮಾಜಿ ನಿರ್ದೇಶಕ ದಯಾನಂದ ಪಾಟೀಲ, ಗಿರೀಶ ಲಕ್ಷಾಣಿ, ರಾಜುಗೌಡ ಪಾಟೀಲ, ಯಲ್ಲಪ್ಪ ದಾಸರಡ್ಡಿ, ಪಾಂಡುರAಗ ಹೂವಣ್ಣವರ, ತಮ್ಮಣ್ಣಪ್ಪ ಅರಳಿಕಟ್ಟಿ, ಕಾರ್ಮಿಕರ ಸಂಘದ ಅಧ್ಯಕ್ಷ ಈರನಗೌಡ ಪಾಟೀಲ, ಉಪಾಧ್ಯಕ್ಷ ಉಮೇಶ ಬಡಿಗೇರ ಹಾಗೂ ಕಾರ್ಖಾನೆ ಸಿಬ್ಬಂದಿ ವರ್ಗ, ರೈತರು, ಷೇರುದಾರರು ಇದ್ದರು.