ಕಲಬುರಗಿ : ನಗರ ಸೇರಿ ಜಿಲ್ಲೆಯ ವಿವಿಧೆಡೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಶುಕ್ರವಾರ ವೈಭವದಿಂದ ಆಚರಿಸಲಾಯಿತು. ಅಪಾರ ಭಕ್ತರು ಗುರುಗಳ ಸನ್ನಿಧಾನಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು. ಜೇವರ್ಗಿ ಕಾಲನಿ ರಾಯರ ಮಠದಲ್ಲಿ ಬೆಳಗ್ಗೆ ೫ಕ್ಕೆ ಶೈಲಜಾ ಕುಲಕರ್ಣಿ ಅವರಿಂದ ಸುಪ್ರಭಾತ, ೬.೩೦ಕ್ಕೆ ಶ್ರೀಸುಧಾ ಸೇವಾ ಸಮಿತಿಯಿಂದ ಪುಷ್ಪಾರ್ಚನೆ, ೮.೩೦ಕ್ಕೆ ವಿಶ್ವ ಮಧ್ವ ಮಹಾಪರಿಷತ್ ಅಡಿ ಬರುವ ವಿವಿಧ ಪಾರಾಯಣ ಸಂಘಗಳ ಸದಸ್ಯರಿಂದ ಸಾಮೂಹಿಕ ಪಾರಾಯಣ, ಅಷ್ಟೋತ್ತರ ನಂತರ ಪಂಚಾಮೃತಾಭಿಷೇಕ, ಅಲಂಕಾರ ಹಾಗೂ ಮಹಾ ಪೂಜೆ, ಕ್ಷೀರಾಭಿಷೇಕ ಜರುಗಿತು. ರಥಾಂಗ ಹೋಮದ ಬಳಿಕ ಪ್ರಮುಖ ಬೀದಿಗಳಲ್ಲಿ ರಜತ ರಥೋತ್ಸವ ನೆರವೇರಿತು. ಗಾಯತ್ರಿ ಯುವಕ ಮಂಡಳಿ ಹಾಗೂ ಜಯತೀರ್ಥ ನಗರದ ಶ್ರೀ ಲಕ್ಷಿö್ಮÃ ನಾರಾಯಣ ಭಜನಾ ಮಂಡಳಿ ಸದಸ್ಯರ ಭಜನೆ ಗಮನಸೆಳೆಯಿತು. ಸಂಜೆ ಬಾಗಲಕೋಟೆಯ ಜಯತೀರ್ಥ ತಾಸಗಾಂವ್ ದಾಸವಾಣಿ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು. ಪಂ.ಗಿರೀಶಾಚಾರ್ಯ ಅವಧಾನಿ, ಸಂಜೀವಾಚಾರ್ಯ, ನರೇಂದ್ರ ಫಿರೋಜಾಬಾದಕರ್, ವಾಸುದೇವರಾವ್ ಮುಂಡರಗಿ, ಪ್ರಶಾಂತ ಕೊರಳ್ಳಿ, ಸುಧೀಂದ್ರ ಜೋಗೂರು, ರಘು ದೋಟಿಹಾಳ, ಅರವಿಂದ ನವಲಿ, ಪ್ರಹ್ಲಾದ ಮಟಮಾರಿ, ಎನ್.ವಿ.ಕುಲಕರ್ಣಿ, ಸುರೇಶ ಹನುಮಸಾಗರ, ವಿನಾಯಕ ಕುಲಕರ್ಣಿ, ಪವನ ಕುಲಕರ್ಣಿ ಇತರರಿದ್ದರು. ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ರಾಯರ ಮಧ್ಯಾರಾಧನೆ ನಿಮಿತ್ತ ಬೆಳಗ್ಗೆ ಅಷ್ಟೋತ್ತರ, ವಿಶೇಷ ಪಂಚಾಮೃತ, ಪುಷ್ಪಾರ್ಚನೆ ಜರುಗಿದವು. ಪಂ.ಶ್ರೀನಿವಾಸಾಚಾರ್ಯ ಪದಕಿ ಪ್ರವಚನ ನೀಡಿದರು. ಮಹಿಳೆಯರಿಂದ ಭಜನೆ ಸೇರಿ ವಿವಿಧ ಸೇವೆಗಳು ನೆರವೇರಿದವು. ಅರ್ಚಕ ಗುಂಡಾಚಾರ್ಯ ನರಿಬೋಳ, ಪ್ರಮುಖರಾದ ಡಿ.ವಿ.ಕುಲಕರ್ಣಿ, ಪುರುಷೋತ್ತಮ ಮಠ, ಶಾಮರಾವ, ಪ್ರಮೋದ ಪಂಥ, ವೆಂಕಟೇಶ ಮಳ್ಳಿ ಇತರರಿದ್ದರು.