ಜಿಲ್ಲೆ

ರಥಕ್ಕೆ ಕೋಳಿ ತೂರಿ ಭಕ್ತಿ ಮೆರೆದ ಜನ

ಕೊಟ್ಟೂರು: ಪಟ್ಟಣದ ಹೊರವಲಯದಲ್ಲಿರುವ ಬಿಕ್ಕಿಮರಡಿ ದುರುಗಮ್ಮನ ರಥಕ್ಕೆ ಭಕ್ತರು ಜೀವಂತ ಕೋಳಿ ತೂರುವ ಮೂಲಕ ಸೋಮವಾರ ಭಕ್ತಿ ಸಮರ್ಪಿಸಿದರು.

ಅನಾದಿ ಕಾಲದಿಂದ ದುರಗಮ್ಮನ ರಥೋತ್ಸವದಲ್ಲಿ ಜೀವಂತ ಕೋಳಿ ತೂರುವ ಸಂಪ್ರದಾಯ ಚಾಲ್ತಿಯಲ್ಲಿದೆ. ರಥಕ್ಕೆ ತೂರಿದ ಕೋಳಿಯನ್ನು ಹಿಡಿಯಲು ಭಕ್ತರು ಮುಗಿ ಬೀಳುತ್ತಾರೆ. ಕೋಳಿ ಸಿಕ್ಕರೆ ಅದೃಷ್ಟ ಎಂದು ಭಕ್ತರು ಭಾವಿಸುತ್ತಾರೆ. ಸಿಕ್ಕ ಕೋಳಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಸಾಕುತ್ತಾರೆ. ಇದರಿಂದ ಮರಿಗಳಾಗುವ ಕೋಳಿಗಳನ್ನು ಮುಂದಿನ ವರ್ಷದ ಜಾತ್ರೆಯಲ್ಲಿ ರಥಕ್ಕೆ ತೂರುತ್ತಾರೆ.