ಜಿಲ್ಲೆ

ರಟ್ಟಿಹಳ್ಳಿ ಆಸ್ಪತ್ರೆಯಲ್ಲಿ ಸೀಸೇರಿಯನ್ ಶಸ್ತ್ರಚಿಕಿತ್ಸೆ ಆರಂಭ

ರಟ್ಟಿಹಳ್ಳಿ: ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಸೀಸೇರಿಯನ್ ಶಸ್ತ್ರ ಚಿಕಿತ್ಸೆ ಹೆರಿಗೆ ಪ್ರಾರಂಭಿಸಲಾಗಿದೆ. ರಟ್ಟಿಹಳ್ಳಿ ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಭಾಗದ ಗರ್ಭಿಣಿ ಮಹಿಳೆಯರು ಇದನ್ನು ಸದುಪಯೋಗಪಡೆದುಕೊಳ್ಳಬಹುದು ಎಂದು ಆರೋಗ್ಯ ಕೇಂದ್ರದ ಆಡಳಿತವೈದ್ಯಾಧಿಕಾರಿ ಡಾ. ಲೋಕೇಶ ಕುಮಾರ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಗುಡ್ಡದಮಾದಪುರ ಗ್ರಾಮದ ಮಹಿಳೆ ಸುಷ್ಮಿತಾ ಅವರಿಗೆ ಸ್ಥಳೀಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞ ಡಾ. ಬಸವರಾಜ ನರೇಗಲ್ ಮತ್ತು ಅರವಳಿಕೆ ತಜ್ಞ ಮಾಸೂರಿನ ಆರೋಗ್ಯ ಕೇಂದ್ರದ ಡಾ. ನೀಲಕಂಠಸ್ವಾಮಿ ನೇತೃತ್ವದಲ್ಲಿ ವೈದ್ಯರ ತಂಡ ಯಶಸ್ವಿಯಾಗಿ ಹೆರಿಗೆ ನಂತರ ಮಾತನಾಡಿದರು.

ಈಗಾಗಲೇ ಒಟ್ಟು 3 ಸೀಸೆರಿಯನ್ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಸಹಜ ಹೆರಿಗೆಯೊಂದಿಗೆ ಅವಶ್ಯವಿದ್ದಲ್ಲಿ ಗರ್ಭಿಣಿಯರ ಆರೋಗ್ಯ ಪರಿಸ್ಥಿತಿಯನ್ನು ಗಮನಿಸಿ ಸಾಮಾನ್ಯ ಸೀಸರಿಯನ್ ಶಸ್ತ್ರ ಚಿಕಿತ್ಸೆ ಅವಶ್ಯವಿದ್ದಲ್ಲಿ ಇಲ್ಲಿಯೇ ಮಾಡಲಾಗುವುದು. ಒಂದು ವೇಳೆ ತುರ್ತು ಶಸ್ತ್ರ ಚಿಕಿತ್ಸೆ ಹೆರಿಗೆ ಅವಶ್ಯವಿದ್ದಲ್ಲಿ ಮಾತ್ರ ಬೇರೆಡೆ ಕಳುಹಿಸಲಾಗುವುದು, ಗರ್ಭಿಣಿಯರು ಅನಗತ್ಯವಾಗಿ ಸಮಯ ಮತ್ತು ದುಂದು ವೆಚ್ಚ ಮಾಡದೇ ಸ್ಥಳೀಯವಾಗಿ ಇಲ್ಲಿರುವ ಸೌಲಭ್ಯದ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.

ಸ್ತ್ರೀರೋಗ ತಜ್ಞ ಡಾ.ಬಸವರಾಜ ನರೇಗಲ್ ಮತ್ತು ಅರವಳಿಕೆ ತಜ್ಞ ಮಾಸೂರಿನ ಆರೋಗ್ಯ ಕೇಂದ್ರದ ಡಾ. ನೀಲಕಂಠಸ್ವಾಮಿ, ಶೂಶ್ರಷಕಿಯರು, ಸಿಬ್ಬಂದಿ ಇದ್ದರು.