ಕೆ.ಆರ್.ಪೇಟೆ: ಸಿದ್ದರಾಮಯ್ಯ ಮೇಲಿನ ಪ್ರಾಸಿಕ್ಯೂಷನ್ ಖಂಡಿಸಿ ಆ.27ರಂದು ಹಮ್ಮಿಕೊಂಡಿರುವ ಬೆಂಗಳೂರಿನ ಫ್ರೀಡಂಪಾರ್ಕ್‌ನಿಂದ ರಾಜಭವನ ಚಲೋ ಕಾರ್ಯಕ್ರಮಕ್ಕೆ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜಿಪಂ ಮಾಜಿ ಸದಸ್ಯ ಐಪನಹಳ್ಳಿ ನಾಗೇಂದ್ರಕುಮಾರ್ ಕರೆ ನೀಡಿದರು.
ಸಿದ್ದರಾಮಯ್ಯರ ವಿರುದ್ಧ ಜೆಜೆಪಿ, ಜೆಡಿಎಸ್ ದೋಸ್ತಿ ಪಕ್ಷದವರು ಆಧಾರರಹಿತವಾಗಿ ಆರೋಪಿಸಿದ್ದಾರೆ. ರಾಜ್ಯಪಾಲರು ಹೊರಡಿಸಿರುವ ಪ್ರಾಷಿಕ್ಯೂಷನ್‌ನಿಂದ ಸಂವಿಧಾನದ ಕಗ್ಗೊಲೆಯಾಗಿದೆ. ದೋಸ್ತಿ ಪಕ್ಷ ರಾಜ್ಯಪಾಲರ ದುರ್ಬಳಕೆ ಮಾಡಿಕೊಂಡಿದೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹಲವು ವರ್ಷಗಳಿಂದ ಅನುಮತಿ ಕೋರಿರುವ ಪ್ರಕರಣಗಳಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿಲ್ಲ. ಕುಮಾರಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದೆ ತಾರತಮ್ಯ ನೀತಿ ಅನುಸರಿಸಿದ್ದಾರೆ. ನಲವತ್ತು ವರ್ಷದಿಂದ ಕಪ್ಪು ಚುಕ್ಕೆಯಿಲ್ಲದಂತೆ ಸಿದ್ದರಾಮಯ್ಯ ರಾಜಕೀಯ ನಡೆಸಿದ್ದಾರೆ. ಈ ಹಿಂದೆ ಕೂಡ ನುಡಿದಂತೆ ನಡೆದಿದ್ದಾರೆ. ಈ ಪ್ರಕರಣ ದೋಸ್ತಿ ಪಕ್ಷಗಳ ಷಡ್ಯಂತ್ರ. ಕಾಂಗ್ರೆಸ್ ಬಲವರ್ಧನೆಗೆ ರಾಜ್ಯ ಕಾರಣವಾಗಿರುವುದಾಗಿ ಸರ್ಕಾರವನ್ನು ಅಸ್ಥಿರಗೊಳಿಸಲು ದೋಸ್ತಿ ಪಕ್ಷ ಷಡ್ಯಂತ್ರ ನಡೆಸುತ್ತಿದೆ. ಕಾನೂನು ಹೋರಾಟದಲ್ಲಿ ಸಿದ್ದರಾಮಯ್ಯರಿಗೆ ಜಯವಾಗಲಿದೆ. ಸಿದ್ದರಾಮಯ್ಯ ಅವರ ಮೇಲಿನ ಪ್ರಾಸಿಕ್ಯೂಷನ್‌ಅನ್ನು ರಾಜ್ಯಪಾಲರು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್, ಮುಖಂಡ ರಾಜಯ್ಯ, ಅಗ್ರಹಾರಬಾಚಹಳ್ಳಿ ಕುಮಾರ್ ಸೇರಿದಂತೆ ಹಲವರಿದ್ದರು.