ಸಿದ್ದಾಪುರ ತಾಲೂಕಿನ ಭಾನ್ಕುಳಿ ಶ್ರೀರಾಮದೇವ ಮಠದ ಗೋಸ್ವರ್ಗದಲ್ಲಿ ಶ್ರೀಮಠದ ದಿಗ್ದರ್ಶಕ ಮಂಡಳಿಯ ಹಿರಿಯ ಸದಸ್ಯ ಸುಬ್ರಾಯ ಹೆಗಡೆ ಕೆಳಗಿನಮನೆ-ಬಿದ್ರಕಾನ ರಾಮಭದ್ರ ಹಾಗೂ ಬೆಳ್ಳಿ ಹೆಸರಿನ ಗೋವುಗಳಿಗೆ ಪೂಜೆ ಮಾಡುವ ಮೂಲಕ ಗೋ ದಿನ ಆಚರಣೆ, ಗೋ ಸೇವೆ, ಗೋ ಪೂಜೆ ಹಾಗೂ ಗೋ ಸಂತರ್ಪಣೆಗೆ ಗುರುವಾರ ಚಾಲನೆ ನೀಡಿದರು.
ಗೋ ದಿನ ಸಮಿತಿ ಗೌರವಾಧ್ಯಕ್ಷ ಆರ್.ಎಸ್. ಹೆಗಡೆ ಹರಗಿ ಹಾಗೂ ಚಂದ್ರಮತಿ ಹೆಗಡೆ ದಂಪತಿ ರಜತ ಹಾಗೂ ಸ್ವರ್ಣಾಲಂಕೃತ ಸವತ್ಸ ಗೋವಿನ ಪೂಜೆ ನೆರವೇರಿಸಿದರು.
ನಂತರ ಭಕ್ತರಿಂದ ಗೋವುಗಳಿಗೆ ವಿಶೇಷ ಸಂತರ್ಪಣೆ ನಡೆಯಿತು. ಗೋ ದಿನ ಸಮಿತಿ ಅಧ್ಯಕ್ಷ ಎಂ.ಜಿ. ರಾಮಚಂದ್ರ ಮರಡುಮನೆ, ಗೋ ಸ್ವರ್ಗ ಸಂಗ್ರಹ ಪ್ರಮುಖ ಗಣಪತಿ ಹೆಗಡೆ ಮೂಗಿಮನೆ, ಗೋ ದಿನ ಸಮಿತಿ ಉಪಾಧ್ಯಕ್ಷ ಎಂ.ಎಂ. ಹೆಗಡೆ ಮಗೇಗಾರು, ಕೋಶಾಧ್ಯಕ್ಷೆ ವೀಣಾ ಭಟ್ಟ ಶಿರಸಿ, ಪ್ರಧಾನ ಕಾರ್ಯದರ್ಶಿ ಮಧು ಜಿ.ಕೆ., ಸಂಚಾಲಕ ಡಾ. ರವಿಮೂರ್ತಿ, ಕಾರ್ಯದರ್ಶಿ ರಾಮಚಂದ್ರ ಅಜ್ಜಕಾನ, ಸಿದ್ದಾಪುರ ಮಂಡಲ ಅಧ್ಯಕ್ಷ ಸುಬ್ರಾಯ ಹೆಗಡೆ ಸುಂಗೋಳಿಮನೆ ಇತರರಿದ್ದರು.
ಜ. 15ರಂದು ಭಕ್ತರಿಂದ ಗೋ ಸೇವೆ, ಗೋ ಪೂಜೆ- ಗೋಸಂತರ್ಪಣೆ. ಮಧ್ಯಾಹ್ನ 2.30ರಿಂದ ಮಲೆನಾಡು ಗೋ ತಳಿ ಕುರಿತು ವಿಚಾರ ಸಂಕಿರಣ, ಸಂಜೆ 6ರಿಂದ ಶಿಶಿರಾ ವಿಘ್ನೕಶ ತಲಕಾಲಕೊಪ್ಪ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.