ಚಿತ್ರದುರ್ಗ: ನಗರದ ವೀರಶೈವ ಅರ್ಬನ್ ಕೋ ಆಪರೇಟಿವ್ ಸೊಸೈಟಿಯ 25ನೇ ವಾರ್ಷಿಕೋತ್ಸವದ ಅಂಗವಾಗಿ ದವಳಗಿರಿ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ರಜತ ಸೌಧ’ ವೀರಶೈವ ಸಮುದಾಯ ಭವನಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಸೊಸೈಟಿ ಅಧ್ಯಕ್ಷ ಪಟೇಲ್‌ಶಿವಕುಮಾರ್ ಮತ್ತಿತರರು ಹಾಜರಿದ್ದರು.
ಸೊಸೈಟಿ ಷೇರುದಾರರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರ ಮಂಜೂರು ಮಾಡಿರುವ ಈ ನಿವೇಶನದಲ್ಲಿ ಅಂದಾಜು 2.50 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ಅತ್ಯಾಧುನಿಕ ಭವನ ನಿರ್ಮಿಸಲಾಗುವುದು. 400 ಜನರು ಕುಳಿತುಕೊಳ್ಳಬಹುದಾದ ಸಭಾಂಗಣ, ಅಡುಗೆ ಮನೆ, ಪಾರ್ಕಿಂಗ್ ಸೌಲಭ್ಯ, 5 ಕೊಠಡಿಗಳು, ಊಟದ ಮನೆ ಇತ್ಯಾದಿ ಸೌಲಭ್ಯಗಳು ಈ ಭವನದಲ್ಲಿ ಇರುತ್ತವೆ.
ಸೊಸೈಟಿಯ ಸಮಾರಂಭಗಳಿಗೂ ಇದು ನೆರವಾಗಲಿದೆ. ಈ ಭಾಗದಲ್ಲಿ ಸುಸಜ್ಜಿತ ಸಮುದಾಯ ಭವನದ ಅಗತ್ಯತೆ ಅರಿತು ಸೊಸೈಟಿಯಿಂದ ನಿರ್ಮಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಒಂದು ತಿಂಗಳ ಒಳಗೆ ಕಾಮಗಾರಿ ಪ್ರಾರಂಭವಾಗಲಿದ್ದು, ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಸೊಸೈಟಿ ಉಪಾಧ್ಯಕ್ಷ ಜಿ.ಟಿ. ಸುರೇಶ್ ಸಿದ್ದಾಪುರ, ನಿರ್ದೇಶಕರಾದ ಎಸ್.ಪರಮೇಶ್ವರಪ್ಪ, ಟಿ. ಮಹಾಂತೇಶ್, ಎಸ್.ವಿ. ನಾಗರಾಜಪ್ಪ, ಕೆಇಬಿ ಷಣ್ಮುಖಪ್ಪ, ಡಿ.ಎಸ್. ಮಲ್ಲಿಕಾರ್ಜನ್, ಜಿ.ಎಂ. ಕರಿಬಸವಯ್ಯ, ಸಿ. ಚಂದ್ರಪ್ಪ, ಜಯಶ್ರೀ , ಆರ್. ಶೈಲಜಾ, ಸೊಸೈಟಿ ಅಧಿಕಾರಿಗಳು, ಸಿಬ್ಬಂದಿ. ಎಂಎಲ್‌ಸಿ ಕೆ.ಎಸ್. ನವೀನ್, ಜಿಲ್ಲಾ ಕೆಡಿಪಿ ಸದಸ್ಯಕೆ.ಸಿ.ನಾಗರಾಜ್,ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜನಯ್ಯ,ವೀರಶೈವ ಸ ಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ,ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿಶಿವಮೂರ್ತಿ,ನಗರಸಭಾ ಸದ ಸ್ಯ ಬಿ.ಸುರೇಶ್,ವಕೀಲರಾದ ಕೆ.ಎನ್.ವಿಶ್ವನಾಥಯ್ಯ,ಅನಿಲ್‌ಕುಮಾರ್,ಕೆ.ವಿ.ಪ್ರಭಾಕರ್,ರುದ್ರೇಶ್‌ಐಗಳ್,ಜಯಕುಮಾರ್,ನಿರ್ಮಲಾ ಬಸವರಾಜು,ಮಹಿಳಾ ಘಟಕದ ಕಾರ‌್ಯದರ್ಶಿ ಉಮಾರಮೇಶ್,ಕವಿತಾ ಶಿವಕುಮಾರ್,ಮಲ್ಲಿಕಾರ್ಜನ್,ಕೊಟ್ರೇಶ್,ಜಯಣ್ಣ,ಸರೋಜ ಮ್ಮ ನಾಗಣ್ಣ,ಶಶಿಕಲಾಪರಮೇಶ್,ರೀನಾವೀರಭದ್ರಪ್ಪ,ಷಡಕ್ಷರಯ್ಯ,ವಿಶ್ವನಾಥ ಶಾಸ್ತ್ರಿ ಮತ್ತಿತರರು ಇದ್ದರು.