ಜಿಲ್ಲೆ

ರಘುವೀರ್ ಟ್ರಸ್ಟ್‌ನಿಂದ ಪ್ರತಿಭೋತ್ಸವ 6ಕ್ಕೆ

ಚಿತ್ರದುರ್ಗ: ಬೆಂಗಳೂರಿನ ರಘುವೀರ್ ಕಲಾ ಸೇವಾ ಟ್ರಸ್ಟ್‌ನಿಂದ ತರಾಸು ರಂಗಮಂದಿರದಲ್ಲಿ ಅ. 6ರಂದು ದಸರಾ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಪಿ.ಎನ್.ಹ್ಯಾಟ್ರಿಕ್ ಸೂರ್ಯ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗಾಗಿ ಭರತನಾಟ್ಯ, ಚಲನಚಿತ್ರ ಗೀತೆಗಳ ನೃತ್ಯ-ಹಾಡುಗಾರಿಕೆ, ದೇಶ ಭಕ್ತಿ, ಭಾವ, ಶಾಸ್ತ್ರೀಯ ಗೀತೆ, ಸಂಗೀತ ವಾದ್ಯ ನುಡಿಸುವಿಕೆ, ಕಿರುನಾಟಕ (10 ನಿಮಿಷ), ಕರ್ನಾಟಕದ ಸಾಂಪ್ರದಾಯಿಕ ವೇಷಭೂಷಣಗಳ ಪ್ರದರ್ಶನ ನಡೆಯಲಿದೆ ಎಂದರು.

ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಗಣ್ಯರಿಂದ ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಗುವುದು. ಆಸಕ್ತರು ಹೆಸರು ನೋಂದಾಯಿಸಲು ಮೊ. 9448204378, 9036004378ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಮಂಜುನಾಥ ನಾಯ್ಕ, ನಿರಂಜನ್ ಇತರರಿದ್ದರು.