ಬಾಗಲಕೋಟೆ ನವನಗರ ಶಾಂತಿ ಆಸ್ಪತ್ರೆಯಲ್ಲಿ ಆರಂಭವಾದ ರಕ್ತಹೀನತೆ ಉಚಿತ ತಪಾಸಣೆ ಹಾಗೂ ಮಾತ್ರೆ ವಿತರಣೆ ಕೇಂದ್ರವನ್ನು ಮಕ್ಕಳತಜ್ಞೆ ಡಾ.ಭುವನೇಶ್ವರಿ ಉಳಮೇಲಿ ಉದ್ಘಾಟಿಸಿದರು. ಡಾ.ಆರ್.ಟಿ.ಪಾಟೀಲ, ಸುನಂದಾ ಪಾಟೀಲ ಇದ್ದರು.  
ಜಿಲ್ಲೆ

ರಕ್ತಹೀನತೆ ತೊಲಗಿಸಲು ಪಣ

ಬಾಗಲಕೋಟೆ: ರಕ್ತಹೀನತೆ ಮನುಕುಲವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ ಎಂದು ಚಿಕ್ಕಮಕ್ಕಳ ತಜ್ಞೆ ಡಾ.ಭುವನೇಶ್ವರಿ ಯಳಮೇಲಿ ಹೇಳಿದರು.

ನಗರದ ನವನಗರ ಬಸ್ ನಿಲ್ದಾಣ ಬಳಿಯ ಶಾಂತಿ ಆಸ್ಪತ್ರೆಯಲ್ಲಿ ರಕ್ತಹೀನತೆ ಉಚಿತ ತಪಾಸಣೆ ಹಾಗೂ ಔಷಧ ವಿತರಣೆ ಕೇಂದ್ರಕ್ಕೆ ಗುರುವಾರ ಮಧ್ಯಾಹ್ನ ಅಽಕೃತ ಚಾಲನೆ ನೀಡಿ ಅವರು ಮಾತನಾಡಿದರು.

ಸುಸ್ತು, ಉಸಿರಾಟ ತೊಂದರೆ, ಶಕ್ತಿಹೀನತೆ ಹೀಗೆ ಅನೇಕ ಆರೋಗ್ಯ ಸಮಸ್ಯೆಗಳು ರಕ್ತಹೀನತೆಯಿಂದ ಕಾಣಿಸಿಕೊಳ್ಳುತ್ತವೆ. ಪೌಷ್ಟಿಕಾಂಶವಿರುವ ಆಹಾರ ಸೇವನೆಯಿಂದ ರಕ್ತಹೀನತೆ ತೊಲಗಿಸಬಹುದು ಎಂದರು.

ಆಸ್ಪತ್ರೆ ಮುಖ್ಯಸ್ಥ ಡಾ.ಆರ್.ಟಿ.ಪಾಟೀಲ ಮಾತನಾಡಿ, ಭಾರತದಲ್ಲಿ ಶೇ.೬೬ರಷ್ಟು ಜನ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲೂ ಶೇ.೬೦ಕ್ಕಿಂತ ಹೆಚ್ಚು ಜನರಲ್ಲಿ ರಕ್ತಹೀನತೆ ಇದೆ. ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಸ್ಯೆ ವಿರುದ್ಧ ಹೋರಾಡಲು ನಮ್ಮ ಆಸ್ಪತ್ರೆಯಲ್ಲಿ ಫೆ.೧ ರಿಂದಲೇ ಕೇಂದ್ರ ಆರಂಭಿಸಲಾಗಿದ್ದು, ಎಲ್ಲರಿಗೂ ಉಚಿತ ತಪಾಸಣೆ ನಡೆಸಲಾಗುತ್ತಿದೆ. ರಕ್ತಹೀನತೆ ಕಂಡುಬAದವರಿಗೆ ೬ ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಗ್ರಾಮೀಣ ಭಾಗದ ಬಡ ಜನತೆ ಈ ಯೋಜನೆ ಸದುಪಯೋಗ ಪಡೆಯಬೇಕು ಎಂದು ಕೋರಿದರು.

ಮಕ್ಕಳ ತಜ್ಞ ಡಾ.ಸುನೀಲ ಪಾಟೀಲ ಮಾತನಾಡಿ, ಯೋಜನೆಯನ್ನು ಸದ್ಯ ನಮ್ಮ ಆಸ್ಪತ್ರೆಯಲ್ಲಿ ಮಾತ್ರ ಆರಂಭಿಸಿದ್ದು, ಪ್ರತಿ ದಿನ ಅಂದಾಜು ೫೦ ಜನರ ತಪಾಸಣೆ ನಡೆಸಲಾಗುತ್ತಿದೆ. ಇದರಲ್ಲಿ ಶೇ.೩೦ ರಷ್ಟು ಜನರಿಗೆ ಮಾತ್ರೆಗಳ ಅಗತ್ಯತೆ ಇರುವುದು ಕಂಡುಬAದಿದೆ. ಅಗತ್ಯವಿರುವ ಎಲ್ಲರಿಗೂ ಮಾತ್ರೆ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳು, ಅನಾಥಾಶ್ರಮಗಳು ಸೇರಿ ಜಿಲ್ಲಾದ್ಯಂತ ವಿಸ್ತರಿಸುವ ಹಾಗೂ ರಕ್ತಹೀನತೆ ಬಗ್ಗೆ ಜಾಗೃತಿ ಮೂಡಿಸುವ ಚಿಂತನೆ ಇದೆ ಎಂದರು.

ಆಸ್ಪತ್ರೆ ಆಡಳಿತಾಽಕಾರಿ ಸುನಂದಾ ಪಾಟೀಲ, ಡಾ.ಟಿ.ಆರ್.ಪಾಟೀಲ, ಡಾ.ಸಂದೀಪ ದುಡ್ಡೊಳ್ಳಿ, ಕೀರ್ತಿ ಹುರಕಡ್ಲಿ, ಚಂದ್ರಕಾAತ ನಿಂಬಾಳ್ಕರ್, ನೀತಾ ತುರಡಗಿ ಇತರರು ಇದ್ದರು.