ಜಿಲ್ಲೆ

ರಕ್ತದೊತ್ತಡ ನಿಯಂತ್ರಣದಲ್ಲಿರಿಸಲು ಕಾಳಜಿ ವಹಿಸಿ

ಬಳ್ಳಾರಿ : ಪ್ರತಿಯೊಬ್ಬರು ಹಲವು ಕ್ರಿಯೆಗಳಿಂದ ರಕ್ತದೊತ್ತಡವನ್ನು ಹತೋಟಿಯಲ್ಲಿರಿಸಿಕೊಳ್ಳಲು ಕಾಳಜಿ ವಹಿಸಬೇಕು ಎಂದು ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಡಾ. ವಿ. ಕೆ. ಮರಿಯಂಬಿ ಹೇಳಿದರು.
ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ನಡೆದ ವಿಶ್ವ ರಕ್ತದೊತ್ತಡ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವನಿಗೆ ಅತಿಯಾಗಿ ಬೊಜ್ಜು ಬರುವುದರಿಂದ ಮತ್ತು ಹೆಚ್ಚಿನ ತೂಕದಿಂದ ರಕ್ತದೊತ್ತಡ ಬರುತ್ತದೆ. ಅದೇ ರೀತಿಯಾಗಿ ಅತಿಯಾದ ಉಪ್ಪಿನ ಅಂಶವಿರುವ ಆಹಾರ ಸೇವನೆ, ಧೂಮಪಾನ ಮತ್ತು ಮದ್ಯಪಾನ ಮಾಡುವುದರಿಂದ ಅಧಿಕ ರಕ್ತದೊತ್ತಡ ಬರುತ್ತದೆ ಎಂದು ತಿಳಿಸಿದರು. ಅಧಿಕ ರಕ್ತದೊತ್ತಡ ಹತೋಟಿಯಲ್ಲಿಡಲು ಮಾನವನು ದೈಹಿಕ ಚಟುವಟಿಕೆ ಹೆಚ್ಚಿಸಬೇಕು. ತೂಕ ಇಳಿಸಬೇಕು. ಧೂಮಪಾನ, ಮಧ್ಯಪಾನ ಬಿಡಬೇಕು. ಕೊಬ್ಬು ಮತ್ತು ಉಪ್ಪಿನ ಅಂಶ ಕಡಿಮೆ ಇರುವ ಆಹಾರ ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು. ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಾರ್ವಜನಿಕರಿಗೂ ಆರೋಗ್ಯ ತಪಾಸಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೇಕರ್, ಹೆಚ್‌ಐಒ ವೈ.ವೀರಾರೆಡ್ಡಿ ಇದ್ದರು.