ಜಿಲ್ಲೆ

ರಕ್ತದಾನದೆಡೆ ತಪ್ಪು ಕಲ್ಪನೆ ಬೇಡ,ಶ್ರೀ ಮಾದಾರ ಶ್ರೀ

ಚಿತ್ರದುರ್ಗ: ರಕ್ತ ದಾನದಿಂದ ಜೀವ ರಕ್ಷಣೆ ಸಾಧ್ಯವಾಗಲಿದೆ ಎಂದು ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಹೇಳಿದರು. ನಗರದ ಐಯುಡಿಪಿ ಲೇಔಟ್ ಆದಿಜಾಂಬವ ಬಡಾವಣೆಯಲ್ಲಿ ಮೋದಕಪ್ರಿಯ ಗೆಳೆಯರ ಬಳಗದ ಮೊ ದಲನೇ ವರ್ಷದ ಗಣೇಶ ಪ್ರತಿಷ್ಠಾಪನೆಯ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಶ್ರೀಗಳು,
ರಕ್ತದಾನ ಮಾಡುವುದರಿಂದ ನಿಶ್ಯಕ್ತಿ ಉಂಟಾಗುತ್ತದೆ ಎಂಬುದು ತಪ್ಪು ಕಲ್ಪನೆ.
ಆರೋಗ್ಯವಂತರು ರಕ್ತದಾನ ಮಾಡುವುದರಿಂದ ಹೊಸ ರಕ್ತಕಣಗಳು ಉತ್ಪತ್ತಿಯಾಗುವುದರೊಂದಿಗೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವವರ ಪ್ರಾಣಗಳನ್ನು ಉಳಿಸಬಹುದಾಗಿದೆ.ಯುವ ಸಮೂಹ ದುಶ್ಚಟಗಳಿಂದ ದೂರವಿರಬೇಕು. ಗಣೇಶ ಹಬ್ಬ ಎಂದರೆ ಬರಿ ಕು ಣಿದು ಕುಪ್ಪಳಿಸುವುದಲ್ಲ.ಸಮಾಜಕ್ಕೆ ಅನುಕೂಲವಾಗುವ ಇಂತಹ ಪರೋಪಕಾರದ ಕೆಲಸಗಳಲ್ಲಿ ತೊಡಗಬೇಕೆಂದರು.
ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿದರು. ಬಳಗದ ಅಧ್ಯಕ್ಷ ಬಿ.ಎಸ್.ಚಂದನ್,ಬಿ.ಎಸ್.ಗಿರಿಧರ್, ಧ್ರುವಕುಮಾರ್,ರವೀಂದ್ರವರ್ಧನ್ ಮತ್ತಿತರರು ಇದ್ದರು.