ಟಪ್ರಭಾ: ಅಪಾಯದಲ್ಲಿರುವ ಅನೇಕ ಜನರ ಜೀವ ರಕ್ತದಾನದಿಂದ ಉಳಿಸಬಹುದು. ಹೀಗಾಗಿ ರಕ್ತದಾನ ಶ್ರೇಷ್ಠ ಎಂದು ಕಪರಟ್ಟಿ&ಕಳ್ಳಿಗುದ್ದಿ ಓಂಕಾರ ಆಶ್ರಮದ ಬಸವರಾಜ ಸ್ವಾಮೀಜಿ ಹೇಳಿದರು.
ಸಮೀಪದ ಕೊಣ್ಣೂರ&ಮರಡಿಮಠದ ಕಾಡಸಿದ್ಧೇಶ್ವರ ಮಠದ ಆವರಣದಲ್ಲಿ ಜೆಜಿ ಸಹಕಾರಿ ಆಸ್ಪತ್ರೆ ಟಪ್ರಭಾ ಹಾಗೂ ಸದ್ಭಕ್ತರ ಸಂಯುಕ್ತಾಶ್ರಯದಲ್ಲಿ ಲಿಂ.ಡಾ.ಅದೃಶ್ಯ ಗುರುಸಿದ್ಧೇಶ್ವರ ಸ್ವಾಮೀಜಿ 8ನೇ ಪುಣ್ಯಸ್ಮರಣೆ ನಿಮಿತ್ತ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಕೊಣ್ಣೂರ&ಮರಡಿಮಠದ ಪೀಠಾಧಿಕಾರಿ ಡಾ.ಪವಾಡೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. 200ಕ್ಕಿಂತಲೂ ಹೆಚ್ಚಿನ ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಅಂಕುರ್ ಬ್ಲಡ್ ಬ್ಯಾಂಕ್ ಚಿಕ್ಕೋಡಿ ಹಾಗೂ ರೋಟರಿ ಕ್ಲಬ್ ಗೋಕಾಕ ಅವರಿಗೆ ರಕ್ತ ಹಸ್ತಾಂತರಿಸಲಾಯಿತು. ಚಿಕಿತ್ಸೆ ಪಡೆದ ರೋಗಿಗಳಿಗೆ ಟಪ್ರಭಾದ ಜೆಜಿ ಸಹಕಾರಿ ಆಸ್ಪತ್ರೆಯಿಂದ ಔಷಧ ಉಚಿತವಾಗಿ ವಿತರಿಸಲಾಯಿತು. ಶ್ರೀಮಠದಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಟಪ್ರಭಾ ಜೆಜಿಕೋ ಆಸ್ಪತ್ರೆಯ ಸಿಇಒ ಡಾ.ಬಿ.ಕೆ.ಎಚ್.ಪಾಟೀಲ ಅಧ್ಯತೆ ವಹಿಸಿದ್ದರು. ಗೋಕಾಕ ರೋಟರಿ ಕ್ಲಬ್ ಚೇರ್ಮನ್ ಮಲ್ಲಿಕಾರ್ಜುನ ಕಲ್ಲೋಳಿ, ಕಾಡಸಿದ್ಧೇಶ್ವರ ಶಿಣ ಸಮಿತಿಯ ಚೇರ್ಮನ್ ಎ.ಜೆ. ಪಾಟೀಲ ಸೇರಿ ಗಣ್ಯರಿದ್ದರು.