ಜಿಲ್ಲೆ

ರಕ್ತದಾನದಿಂದ ಪ್ರಾಣ ಉಳಿಸಲು ಸಾಧ್ಯ : ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿಕೆ




ಚಾಮರಾಜನಗರ : ಒಬ್ಬ ವ್ಯಕ್ತಿ ರಕ್ತದಾನ ಮಾಡಿದರೆ, ಅಮೂಲ್ಯವಾದ ಮೂವರ ಪ್ರಾಣವನ್ನು ಉಳಿಸಲು ಸಾಧ್ಯವಿದೆ ಎಂದು ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.


ನಗರದ ಮಹಾಮನೆಯಲ್ಲಿ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನ ಬಹಳ ಶ್ರೇಷ್ಟವಾದ ದಾನವಾಗಿದೆ. ಸಂಘ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿ, 56 ಜನ ರಕ್ತದಾನ ಮಾಡಿರುವುದು ಪುಣ್ಯದ ಕೆಲಸವಾಗಿದೆ ಎಂದರು.


ಎಎಸ್ಪಿ ಕೆ.ಎಸ್.ಸುಂದರ್ ರಾಜ್, ನಗರಸಭೆ ಮಾಜಿ ಉಪಾಧ್ಯಕ್ಷ ಸೆಲ್ವಿ ಬಾಬು, ಕಸಾಪ ಮಾಜಿ ಅಧ್ಯಕ್ಷ ಬಿ.ಎಸ್.ವಿನಯ್ ಸೇರಿದಂತೆ 56 ಜನ ರಕ್ತದಾನ ಮಾಡಿದರು. 54ನೇ ಬಾರಿ ರಾಜೇಶ್, 24ನೇ ಬಾರಿ ನಾರಾಯಣ ಅವರು ರಕ್ತದಾನ ಮಾಡಿ ಶಿಬಿರಕ್ಕೆ ವಿಶೇಷತೆಯನ್ನು ತಂದುಕೊಟ್ಟರು. ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ರೋಟರಿ ಅಧ್ಯಕ್ಷ ಕೆಂಪನಪುರ ಮಹದೇವಸ್ವಾಮಿ, ಡಿವೈಎಸ್ಪಿ ಪ್ರಿಯದರ್ಶಿನಿ ಈಶ್ವರ ಸಾಣೆಕೊಪ್ಪ, ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್, ರಕ್ತನಿಧಿ ಅಧಿಕಾರಿ ಡಾ.ಮಹೇಶ್ ಇತರರಿದ್ದರು.