ಜಿಲ್ಲೆ

ರಕ್ತದಾನದಿಂದ ಆರೋಗ್ಯ ವೃದ್ಧಿ

ಹನೂರು: ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಜತೆಗೆ ಇನ್ನೊಂದು ಜೀವವನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದು ವೈದ್ಯ ಡಾ.ಕುಮಾರ್ ತಿಳಿಸಿದರು.


ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜು ವತಿಯಿಂದ ಬುಧವಾರ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅರಿವು ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕೆಲವರು ಮೂಢನಂಬಿಕೆಗಳಿಂದ ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಇದು ಸರಿಯಲ್ಲ. ರಕ್ತದಾನ ಶ್ರೇಷ್ಠದಾನ. ತುರ್ತು ಹಾಗೂ ಇನ್ನಿತರೆ ಸಂದರ್ಭದಲ್ಲಿ ಮತ್ತೊಂದು ಜೀವವನ್ನು ಕಾಪಾಡಲು ಸಹಕಾರಿ. ಆದ್ದರಿಂದ ಯಾವುದೇ ಆತಂಕಕ್ಕೆ ಒಳಗಾಗದೇ ರಕ್ತದಾನ ಮಾಡಲು ಮುಂದಾಗಬೇಕು. ಇದು ಉತ್ತಮ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು ಎಂದು ತಿಳಿಸಿದರು.


ಬಳಿಕ ಅಸ್ಪತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಗ್ರಾಮದ ಮುಖ್ಯರಸ್ತೆಯಲ್ಲಿ ಜಾಥಾ ನಡೆಸುವುದರ ಮುಲಕ ಕಿರುನಾಟಕ ಪ್ರದರ್ಶಿಸಿ ರಕ್ತದಾನದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.


ಆಸ್ಪತ್ರೆ ಆಡಳಿತಾಧಿಕಾರಿ ಸಿಸ್ಟರ್ ಡೆಲೀನಾ, ರಕ್ತಕೇಂದ್ರದ ಮುಖ್ಯಸ್ಥೆ ಡಾ.ದೀನಾ, ವೈದ್ಯರಾದ ಡಾ.ರೋನಾಲ್ಡ್, ಡಾ.ಕ್ಯಾತರಿನ್, ಡಾ.ವಿಕಾಸ್ ನಾಯಕ್, ಡಾ.ಬಸವರಾಜು ಹಾಗೂ ಕಾಲೇಜಿಕ ಮೇಲ್ವಿಚಾರಕರಾದ ಬ್ರಿಜಿತ್, ವಿಮಲ್ ರೋಜ್ ಇನ್ನಿತರರು ಇದ್ದರು.