ಚಿತ್ರದುರ್ಗ: ಸದೃಢ ಯುವಜನ ಸಮಾಜದ ನಿರ್ಮಾಣಕ್ಕಾಗಿ ಅನಿಮಿಯಾ(ರಕ್ತ ಹೀನತೆ)ಮುಕ್ತ ಕರ್ನಾಟಕ ಯೋಜನೆ ಪೂರಕವಾಗಿದೆ ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಯಡಿ ಜಿಲ್ಲೆಯ ಎಲ್ಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಅಗತ್ಯ ಸಿದ್ಧತೆ ಕೈ ಗೊಳ್ಳ ಬೇಕು. ರಕ್ತ ಹೀನತೆ ಪತ್ತೆಹಚ್ಚುವಿಕೆ ಕಾರ‌್ಯ ಸಮರ್ಪಕ ವಾಗಿರ ಬೇಕು, ರಕ್ತ ಹೀನತೆ ನಿವಾರಣೆಗೆ ಸಮುದಾಯದಲ್ಲಿ ಜಾಗೃತಿ ಮೂಡಿಸ ಬೇಕೆಂದರು.
ಅನಿಮಿಯಾ ಮುಕ್ತ ಕರ್ನಾಟಕ ಯೋಜನೆ ಮಾಹಿತಿ ನೀಡಿದ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್ ಅವರು, ರಾಜ್ಯದಲ್ಲಿ ರಕ್ತ ಹೀನತೆ ಯಿಂದ ಬಳಲುತ್ತಿರುವ 16-18 ವರ್ಷದ ಯುವ ಜನರಿಗೆ ಪೂರಕ ಚಿಕಿತ್ಸೆಗೆ ಆರೋಗ್ಯ ಇಲಾಖೆ ವಿವಿಧ ಇಲಾಖೆ ಮುಂದಾಗಿದೆ. ಮೊದಲ ಹಂತದಲ್ಲಿ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಪ್ರಥಮ, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಯಾ ಕಾಲೇ ಜು ಗಳಲ್ಲೇ ಹಿಮೋಗ್ಲೋಬಿನ್ ಪ್ರಮಾಣ ಪರೀಕ್ಷಿಸಿ, ಕಡಿಮೆ ಹಿಮೋಗ್ಲೋಬಿನ್ ಇರುವಂಥ ವಿದ್ಯಾರ್ಥಿಗಳಿಗೆ ಅಗತ್ಯ ಮಾತ್ರೆಗಳನ್ನು ನೀಡಲಾಗು ವುದು. ಪೌಷ್ಟಿಕ ಆಹಾರ ಸೇವನೆ ಹಾಗೂ ರಕ್ತ ಹೀನತೆ ಕುರಿತಂತೆ ಮಹಿಳೆಯರಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ 5 ವರ್ಷದೊಳಗಿನ ಮಕ್ಕಳನ್ನು ಕಾಡುವ ನ್ಯೂಮೋನಿಯಾ ಪತ್ತೆಗಾಗಿ ನ.12ರಿಂದ 2024 ಫೆಬ್ರವರಿ 29ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನ.15ರಿಂದ 18ರವರೆಗೆ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ‌್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷ ಅತಿಸಾರ ಸಂ ಬಂಧಿ ರೋಗಗಳಿಂದ ದೇಶದಲ್ಲಿ 62 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗುತ್ತಿದ್ದಾರೆ ಎಂದು ಅಭಿನವ್ ಹೇಳಿದರು.
ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಡಿಡಿಪಿಐ ಕೆ. ರವಿ ಶಂಕರ್‌ರೆಡ್ಡಿ, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಸುಬ್ರಾನಾಯಕ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ,ವಾರ್ತಾಧಿಕಾರಿ ಮತ್ತಿತರರು ಇದ್ದರು.