ಸೊರಬದಲ್ಲಿ ತಾಲೂಕು ಹಸಲರ ಬುಡಕಟ್ಟು ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಸಭೆಯಲ್ಲಿ ತಾಲೂಕು ಹಸಲರ ಬುಡಕಟ್ಟು ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಂ.ನಿರಂಜನಪ್ಪ ಮಾತನಾಡಿದರು. ಏಕಾಂತ, ಬಲರಾಮ, ಅಶೋಕ್ ಇದ್ದರು. 
ಜಿಲ್ಲೆ

ರಂದೀಪ್ ವರ್ಗಾವಣೆ ರದ್ದುಗೊಳಿಸಿ

ಟಿ.ಎಚ್.ಸಂತೋಷ್ ಕುಮಾರ್

ಸೊರಬ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಕಾಡಂಚಿನ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಾಮಾಣಿಕ ಅಕಾರಿಯನ್ನು ಮಾತೃ ಇಲಾಖೆಯಲ್ಲಿ ಉಳಿಸಿಕೊಳ್ಳಲು ಸರ್ಕಾರ ಮುಂದಾಗಬೇಕು ಎಂದು ತಾಲೂಕು ಹಸಲರ ಬುಡಕಟ್ಟು ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಂ.ನಿರಂಜನಪ್ಪ ಒತ್ತಾಯಿಸಿದರು.

ಪಟ್ಟಣದಲ್ಲಿ ತಾಲೂಕು ಹಸಲರ ಬುಡಕಟ್ಟು ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮೂಲ ಸೌಲಭ್ಯಗಳಿಂದ ವಂಚಿತರಾಗಿರುವ ಸಮುದಾಯಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿ ಹುರುಪಿನಿಂದ ಕಾರ್ಯನಿರ್ವಹಿಸುವ ರಂದೀಪ್ ಅವರು ಜನಸಾಮಾನ್ಯರ ಜತೆ ಉತ್ತಮ ಸ್ಪಂದನೆಯಿಂದ ಕಾರ್ಯನಿರ್ವಹಿಸುತ್ತಾರೆ. 12 ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ 200 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಅವುಗಳ ಕಲ್ಯಾಣಕ್ಕೆ ಹಣ ಸಮಪರ್ಕವಾಗಿ ಬಳಸಿ ಸಮಗ್ರ ಕಲ್ಯಾಣಕ್ಕಾಗಿ ರಂದೀಪ್ ಅವರಂತಹ ದಕ್ಷ ಅಕಾರಿಯನ್ನು ಇದೇ ಇಲಾಖೆಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಆದಿವಾಸಿಗಳ ಏಳಿಗೆ ಶ್ರಮಿಸುತ್ತಿದ್ದ, ಪ್ರಾಮಾಣಿಕವಾಗಿ ದುಡಿಯುತ್ತಿದ್ದ ಅಕಾರಿಯನ್ನು ವರ್ಗಾವಣೆ ಮಾಡುವ ಮೂಲಕ ಆದಿವಾಸಿ ವಿರೋ ಧೋರಣೆ ತೋರಿದ ಸರ್ಕಾರದ ನಡೆ ಖಂಡನೀಯ. ಸಣ್ಣಪುಟ್ಟ ಸಮಾಜಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಕಾರಿಗಳನ್ನು ರಾಜಕೀಯ ಉದ್ದೇಶದಿಂದ ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಏಕಾಂತ, ಬಲರಾಮ, ಅಶೋಕ್ ಇದ್ದರು.