ಕಮಲನಗರ: ರಂಡ್ಯಾಳ ಗ್ರಾಮದಲ್ಲಿ ಬುಧವಾರ ಗುರು ಚೆನ್ನಮಲ್ಲೇಶ್ವರರ ೪೩ನೇ ಜಾತ್ರೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಪಲ್ಲಕ್ಕಿ ಮೆರವಣಿಗೆಗೆ ಡೋಣಗಾಂವ್(ಎಂ) ಹಾವಗಿಸ್ವಾಮಿ ಮಠದ ಪೀಠಾಧಿಪತಿ ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯರು ಚಾಲನೆ ನೀಡಿದರು.
ನಂತರ ಮಾತನಾಡಿದ ಶ್ರೀಗಳು, ಶ್ರೀ ಗುರು ಚೆನ್ನಮಲ್ಲೇಶ್ವರ ಅಜ್ಜನವರ ಮಹಿಮೆ ಅಪಾರವಾದದ್ದು. ಅವರನ್ನು ನಂಬಿ ನಡೆದ ಭಕ್ತರಿಗೆ ಅವರ ಇಚ್ಛಾಶಕ್ತಿ ಪೂರ್ತಿಯಾಗುವುದು. ಪೂಜ್ಯರು ಭವರೋಗದ ವೈದ್ಯರಾಗಿದ್ದರು. ಮಠಕ್ಕೆ ದರ್ಶನಕ್ಕೆ ಬಂದ ಭಕ್ತರಲ್ಲಿ ಸುಖ, ಶಾಂತಿ, ನೆಮ್ಮದಿ ಕರುಣಿಸುತ್ತಾರೆ ಎಂಬುದು ಭಕ್ತರಲ್ಲಿ ಅಪಾರ ನಂಬಿಕೆ ಇದೆ ಎಂದರು.
ಡೋಣಗಾಂವ್(ಎಂ) ಮಠದ ಶ್ರೀ ಉಮಾಕಾಂತ ದೇಶಿಕೇಂದ್ರ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಬೆಳಗ್ಗೆ ಅಗ್ನಿಕುಂಡಕ್ಕೆ ಪೂಜೆ ಸಲ್ಲಿಸಿದರು. ಪಾಟೀಲ್ ಕುಟುಂಬದವರಿಂದ ರುದ್ರಾಭಿಷೇಕ, ಕುಂಕುಮ, ಅರ್ಜನೆ ಸೇರಿ ವಿಶೇಷ ಪೂಜೆ ನೆರವೇರಿಸಿದರು. ದರ್ಶನಕ್ಕೆ ಬಂದ ಭಕ್ತರೆಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಹಣೇಗಾಂವದ ಶ್ರೀ ಶಂಕರಲಿಂಗ ಶಿವಾಚಾರ್ಯ, ಸಾಯಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಹುಡುಗಿಯ ಶ್ರೀ ಚೆನ್ನಮಲ್ಲ ಸ್ವಾಮೀಜಿ, ಶಿವಣಿಯ ಶ್ರೀ ಹಾವಗಿಲಿಂಗ ಸ್ವಾಮೀಜಿ, ಕವಳಾಸ ಶ್ರೀ ಬಸವಲಿಂಗ ಸ್ವಾಮೀಜಿ, ಲಾಡಗೇರಿ ಶ್ರೀ ಗಂಗಾಧರ ಸ್ವಾಮೀಜಿ, ಶ್ರೀ ಶಿವಶಂಕರ ಸ್ವಾಮೀಜಿ, ಪೂಜಾರಿ ಸಿದ್ರಾಮಯ್ಯ ಸ್ವಾಮಿ, ಗಂಗಾಧರ ನಿಡೋದೆ, ಗ್ರಾಪಂ ಸದಸ್ಯ ರಾಜಕುಮಾರ ಪಾಟೀಲ್, ಹಿರಿಯರಾದ ಮಾಧವರಾವ ಪಾಟೀಲ್, ಶಂಕರೆಪ್ಪ ಬಿರಾದಾರ, ಈಶ್ವರ ಭಂಡೆ, ಶಾಂತಕುಮಾರ ಭಂಡೆ ಇತರರಿದ್ದರು.
ರಂಡ್ಯಾಳ, ಹಕ್ಯಾಳ, ಡಿಗ್ಗಿ, ಮುರ್ಕಿ, ಕೊಟಗ್ಯಾಳ, ಕಮಲನಗರ, ತೋರಣಾ, ಮದನೂರು, ಖತಗಾಂವ್, ರಾಂಪೂರು, ಮುಧೋಳ, ಬೆಳಕುಣಿ, ಹೊಳಸಮುದ್ರ ಗ್ರಾಮ ಸುತ್ತಮುತ್ತಲಿನ ಗ್ರಾಮದ ಭಕ್ತಾಧಿಗಳು ಮತ್ತು ಗ್ರಾಮಸ್ಥರು ಇದ್ದರು.
ಪ್ರತಿವರ್ಷದಂತೆ ಗುರು ಚೆನ್ನಮಲ್ಲೇಶ್ವರ ೪೩ನೇ ಜಾತ್ರೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವರ್ಷವೂ ಇನ್ನೂ ಹೆಚ್ಚಿನ ಭಜನಾ ತಂಡ, ಕಿರ್ತನೆ, ಪ್ರವಚನ, ಪುರವಂತಿಕೆ ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಂಡಿರುವುದರಿಂದ ಮೆರಗು ಹೆಚ್ಚಿದೆ.
| ಡಾ.ಶಂಭುಲಿಂಗ ಶಿವಾಚಾರ್ಯರು.