ಬೀದರ್: ಮಕರ ಸಂಕ್ರಾಂತಿ ನಿಮಿತ್ತ ಶ್ರೀ ವೈಷ್ಣೋದೇವಿ ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ನಿಂದ ಭಾನುವಾರ ಇಲ್ಲಿನ ವಿದ್ಯಾನಗರದ ಲಕ್ಷ್ಮೀಬಾಯಿ ಕಮಠಾಣೆ ಕಾಲೇಜಿನಲ್ಲಿ ಯುವತಿಯರು ಹಾಗೂ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ.
ಬೆಳಗ್ಗೆ 9.30ಕ್ಕೆ ಸ್ಪರ್ಧೆ ಶುರುವಾಗಲಿದ್ದು, ಎರಡು ವಿಭಾಗಗಳಲ್ಲಿ ನಡೆಯಲಿವೆ. ಚುಕ್ಕಿ ಹಾಗೂ ಫ್ರೀ ಹ್ಯಾಂಡ್ ರಂಗೋಲಿಯಲ್ಲಿ ಪಾಲ್ಗೊಳ್ಳಬಹುದು. ವಿಜೇತರಿಗೆ ನಗದು ಬಹುಮಾನ, ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ನೀಡಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು ಶನಿವಾರದೊಳಗೆ ಹೆಸರು ಮತ್ತು ವಿಭಾಗವನ್ನು 9242268227ಗೆ ಕರೆ ಮಾಡಿ ನೋಂದಾಯಿಸಬಹುದು ಹಾಗೂ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.