ಬಾಗಲಕೋಟೆ: ನವನಗರದ ಸರಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಾಲಕಿಯರ ವಸತಿ ನಿಲಯಗಳಲ್ಲಿ ರಂಗೋಲಿ ಬಿಡಿಲಕ್ಷ್ಮೀ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸೈರಾಬಾನು ನದಾಪ್ ಅವರು ತಮ್ಮ ವ್ಯಾಪ್ತಿಯ ಬಾಲಕಿಯರ ವಸತಿ ನಿಲಯಗಳಲ್ಲಿ ಸುಂದರವಾದ ರಂಗೋಲಿಯಲ್ಲಿ ಓಟ್ ಇಂಡಿಯಾ, ಮೇ ೭ ರಂದು ತಪ್ಪದೇ ಮತದಾನ ಮಾಡಿ, ಚುನಾವಣಾ ಪರ್ವ, ದೇಶದ ಗರ್ವ, ನಮ್ಮ ಮತ ನಮ್ಮ ಹಕ್ಕು, ಪ್ರಜಾಪ್ರಭುತ್ವದಲ್ಲಿ ಮತದಾನವೇ ಹಬ್ಬ ಎಂದು ವಿದ್ಯಾರ್ಥಿಗಳ ಮೂಲಕ ಬಿಡುಸುವ ಮೂಲಕ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸೈರಾಬಾನು ನದಾಪ್ ಅವರು ನಿಲಯದಲ್ಲಿರುವ ೧೮ ವರ್ಷ ಪೂರೈಸಿದ ಎಲ್ಲ ವಿದ್ಯಾರ್ಥಿಗಳು ಮೇ ೭ ರಂದು ತಪ್ಪದೇ ಮತದಾನದ ಹಕ್ಕನ್ನು ಚಲಾಯಿಸುವ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಮರಟ್ಟಿ, ನಿಲಯ ಪಾಲಕರಾದ ಶರೀಪಾ ಶೆರೆಗಾರ, ಲಕ್ಷ್ಮೀ ಗಾಣಿಗೇರ, ಸುಮಿತ್ರಾ ಹೊಸಮನಿ ಸೇರಿದಂತೆ ಇತರರು ಇದ್ದರು.