ಬೆಳಗಾವಿ: ಹೋಳಿ ಹುಣ್ಣಿಮೆ ಅಂಗವಾಗಿ ಶುಕ್ರವಾರ ಜಿಲ್ಲಾದ್ಯಂತ ವಯಸ್ಸಿನ ಬೇಧ ಮರೆತು ಜನರು ಬಣ್ಣದಲ್ಲಿ ಮಿಂದೆದ್ದು, ಡಿಜೆ ಹಾಡಿಗೆ ಮೈಮರೆತು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ನಗರದ ಪ್ರಮುಖ ರಸ್ತೆ, ವೃತ್ತ, ಮಾರುಕಟ್ಟೆ ಮತ್ತಿತರ ಪ್ರದೇಶಗಳಲ್ಲಿ ಬಣ್ಣದ ಮುಖಗಳೇ ಗೋಚರಿಸಿದವು. ಬಹುತೇಕ ಜನರ ಗುರುತು ಸಿಗದಂತೆ ಬಣ್ಣದಲ್ಲಿ ಕಾಣ ಸಿಗುತ್ತಿದ್ದರು. ರಾಣಿ ಚನ್ನಮ್ಮ ನಗರ, ಅನಗೋಳ, ವ್ಯಾಕ್ಸಿನ್ ಡಿಪೋ ಮೈದಾನ, ಹಳೇ ಪಿಬಿ ರಸ್ತೆ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ನಾರ್ವೇಕರ ಗಲ್ಲಿ, ಗೋಂಧಳಿ ಗಲ್ಲಿ, ಚವಾಟ್ ಗಲ್ಲಿ, ಶೆಟ್ಟಿ ಗಲ್ಲಿ, ಬಡಕಲ್ ಗಲ್ಲಿ, ಕಡಕ್ ಗಲ್ಲಿ, ಖಡೇ ಬಜಾರ್ ಪ್ರದೇಶಗಳಲ್ಲಿ ಬಣ್ಣದಾಟ ಜೋರಾಗಿತ್ತು. ಯುವಕ&ಯುವತಿಯರು, ಮಕ್ಕಳು ಪರಸ್ಪರ ಬಣ್ಣ ಎರಚಿಕೊಂಡು ಹೋಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಕೆಲವರು ಮನೆಯಂಗಳದಲ್ಲೇ ಕುಟುಂಬ ಸದಸ್ಯರಿಗೆ ಬಣ್ಣ ಹಚ್ಚಿ ಖುಷಿಪಟ್ಟರೆ, ಇನ್ನೂ ಕೆಲವರು ಬೈಕ್ನಲ್ಲಿ ಸುತ್ತಾಡಿ ಸಂಭ್ರಮಿಸಿದರು.
ಬಣ್ಣದಾಟದಲ್ಲಿ ಉರುಳುಸೇವೆ: ನಗರದ ಪಾಂಗುಳ ಗಲ್ಲಿಯ ಜೈನ ಮಂದಿರದಿಂದ ಅಶ್ವತ್ಥಾಮ ಮಂದಿರ ಎದುರಿಗೆ ಬಣ್ಣದಾಟದ ನಂತರ ಉರುಳು ಸೇವೆ ಮಾಡಿದರೆ ಶಾಪ ವಿಮೋಚನೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ನಂಬಿಕೆಯಿಂದಲೇ ಈ ವರ್ಷವೂ ನೂರಾರು ಯುವಕರು ಉರುಳುಸೇವೆ ಮಾಡಿ, ಹರಕೆ ತೀರಿಸಿದರು. ಇನ್ನು ಚವಾಟ್ ಗಲ್ಲಿಯಲ್ಲಿರುವ ಕಾಮಣ್ಣನ ಗುಡಿಯಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ, ಗುಡಿಯ ಮೇಲೆ ಕಾಯಿ ಹಾರಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.
ಬಿಗಿ ಪೊಲೀಸ್ ಬಂದೋಬಸ್ತ್: ಬೆಳಗಾವಿ ಮಹಾನಗರದಲ್ಲಿ ಹೋಳಿ ಹಬ್ಬದ ಹಿನ್ನೆಲೆ ಸೂಕ್ಷ$್ಮ, ಮಾರುಕಟ್ಟೆ ಪ್ರದೇಶಗಳಲ್ಲಿ ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ನಗರದ ಆಯಕಟ್ಟಿನ ಜಾಗಗಳಲ್ಲಿ 1200ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಕೆಲ ಭಾಗದಲ್ಲಿ ಸಿಸಿಟಿವಿಗಳ ಮೂಲಕ ಸಾರ್ವಜನಿಕರ ಚಲನವಲನ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ರಸ್ತೆ ಅಪಘಾತ ಹೊರತು ಪಡಿಸಿದರೆ ನಗರದಲ್ಲಿ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಗನ್ಯಾಂಗ್ ತಿಳಿಸಿದ್ದಾರೆ.
ಅಪಘಾತದಲ್ಲಿ 20 ಜನರಿಗೆ ಗಾಯ: ಬಣ್ಣದೋಕುಳಿ ವೇಳೆ ಬೇಕಾಬಿಟ್ಟಿಯಾಗಿ ಬೈಕ್ ಚಲಾವಣೆ ಮಾಡಿದ್ದರಿಂದ ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿ 20ಕ್ಕೂ ಅಧಿಕ ಬೈಕ್ ಸವಾರು ಗಾಯಗೊಂಡಿದ್ದಾರೆ. ಕೆಲ ಬೈಕ್ ಸವಾರರಿಗೆ ಬಲವಾದ ಪೆಟ್ಟು ಬಿದ್ದದ್ದರಿಂದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮದ್ಯದ ಅಮಲಿನಲ್ಲಿ ವಾಹನ ಓಡಿಸಿದ್ದರಿಂದಲೇ ಅಪಘಾತ ಸಂಭವಿಸಿವೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಫೋಟೋ
14ಮಂಜು1& ಬೆಳಗಾವಿ ನಗರದ ವಿವಿಧೆಡೆ ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವಕ&ಯುವತಿಯರು.
14ಮಂಜು1ಎ& ಬೆಳಗಾವಿನಗರದ ಪಾಂಗುಳ ಗಲ್ಲಿಯ ಜೈನ ಮಂದಿರದಿಂದ ಅಶ್ವತ್ಥಾಮ ಮಂದಿರದ ವರೆಗೆ ನೂರಾರು ಯುವಕರು ಉರುಳುಸೇವೆ ಮಾಡಿ ಹರಕೆ ತೀರಿಸಿದರು.
14ಮಂಜು1ಬಿ& ಬೆಳಗಾವಿ ನಗರದಲ್ಲಿ ಶುಕ್ರವಾರ ಡಿಸಿ ಮೊಹಮ್ಮದ ರೋಷನ್, ಎಸ್ಪಿ ಡಾ.ಭೀಮಾಶಂಕರ ಗುಳೇದ ಕುಟುಂಬ ಸದಸ್ಯರೊಂದಿಗೆ ಹೋಳಿ ಹಬ್ಬ ಆಚರಿಸಿದರು.