ಕಲಬುರಗಿ: ಗ್ರಾಮೀಣ ಪ್ರದೇಶದಲ್ಲಿ ರಂಗಾಯಣದ ಕಾರ್ಯಕ್ರಮಗಳು ಅತೀ ಹೆಚ್ಚು ಜರುಗಬೇಕು. ನಗರಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳು ಸುದ್ದಿಗೆ ಮಾತ್ರ ಸೀಮಿತವಾಗುತ್ತವೆ. ಅದೇ ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಿದಲ್ಲಿ ಅಲ್ಲಿನ ಪ್ರತಿಭೆಗಳನ್ನು ಗುರುತಿಸಲು ಸೂಕ್ತ ವೇದಿಕೆ ಒದಗಿಸಿಕೊಟ್ಟಂತಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ ಬಡಿಗೇರ ಹೇಳಿದರು.
ಕಲಬುರಗಿ ರಂಗಾಯಣಯದಿಂದ ಸಿದ್ದಯ್ಯ ಪುರಾಣಿಕ ಸಮುಚ್ಛಯ ಆವರಣದಲ್ಲಿ 2020-21ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಭಾನುವಾರ ಆಯೋಜಿಸಿದ್ದ ಸಾಮಾಜಿಕ ಅರಿವು ಸಾಂಸ್ಕೃತಿಕ ಉತ್ಸವದ 2ನೇ ದಿನದ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ವಾರಕೊಮ್ಮೆ ನಡೆಯುವ ಸಂತೆಯಲ್ಲಿ ಬೀದಿ ನಾಟಕಗಳು ಆಯೋಜಿಸಬೇಕು. ಈ ಮೂಲಕ ಜನರಲ್ಲಿ ಸಾಮಾಜಿಕ ಅರಿವು ಮೂಡಿಸಲು ಸಾಧ್ಯವಾಗಲಿದೆ ಎಂದರು
ಶೋಷಿತರ ಅರಿವು-ಅಂಬೇಡ್ಕರ್ ಚಿಂತನೆ ಕುರಿತು ನಡೆದ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಪ್ರಗತಿಪರ ಚಿಂತಕ ವಿಠ್ಠಲ್ ವಗ್ಗನ್, ಅಂಬೇಡ್ಕರ್ ಅವರು ಕೇವಲ ಒಬ್ಬ ವ್ಯಕ್ತಿಯಲ್ಲ, ಬಹು ಸಂಸ್ಕೃತಿಯ ಜನನಾಯಕ. ತಳ ಸಮುದಾಯದ ಬಗ್ಗೆ ಹೆಚ್ಚಿನ ಜ್ಞಾನ ಅವರು ಹೊಂದಿದ್ದರು ಎಂದರು.
ತಳ ಸಮುದಾಯಗಳ ನಾಟಕಗಳು ಒಂದು ಚಿಂತನೆ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಕನರ್ಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಮಹೇಂದ್ರ ಮಾತನಾಡಿ, ತಳ ಸಮುದಾಯದ ಬಗ್ಗೆ ತಾತ್ಸರ ಭಾವನೆ ಬೇಡ, ಅವರು ನಮ್ಮವರೆ ಎಂಬ ಭಾವನೆ ಎಲ್ಲರಲ್ಲಿ ಮೂಡಬೇಕಿದೆ ಎಂದರು.
ಶಿವರಾಂ ಕಾರಂತರ ಚೋಮನದುಡಿ, ಯು.ಆರ್ ಆನಂತಮೂತರ್ಿ ಅವರ ಸಂಸ್ಕಾರ, ಎಂ.ಕೆ ಇಂದಿರಾ ಅವರ ಗೆಜ್ಜೆಪೂಜೆ ಗಳಂತಹ ಕಾದಂಬರಿಗಳು ನಾಟಕಗಳಾಗಿ ಪ್ರದರ್ಶನಗೊಳ್ಳಬೇಕು. ಆಗ ಜನರಲ್ಲಿ ಸಾಮಾಜಿಕ ಅರಿವು ಬಹಳ ಗಾಢವಾಗಿ ನೆಲೆಯೂರಲು ಸಾಧ್ಯ ಎಂದರು.
ಕಲಬುರಗಿ ರಂಗಾಯಣದ ನಿದರ್ೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಸಂದೀಪ ನಿರೂಪಣೆ ಮಾಡಿದರು.