ಜಿಲ್ಲೆ

ರಂಗಾಯಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವರ ಭೇಟಿ

ಕಲಬುರಗಿ: ನಗರದ ರಿಂಗ್ ರಸ್ತೆಯಲ್ಲಿರುವ ರಂಗಾಯಣಕ್ಕೆ ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಗುರುವಾರ ರಾತ್ರಿ ಭೇಟಿ ನೀಡಿದರು.
ನಾಟಕಗಳ ಪ್ರದರ್ಶನಕ್ಕೆ ಭವನದ ಸಮಸ್ಯೆಯಿದ್ದು ಕಂದಾಯ ಇಲಾಖೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆವರಣದಲ್ಲಿ ನಿರ್ಮಿಸಿರುವ ಸ್ವಾತಂತ್ರ್ಯ ಹೋರಾಟಗಾರರ ಭವನವನ್ನು ರಂಗಾಯಣಕ್ಕೆ ಹಸ್ತಾಂತರಿಸಲು ನಿರ್ದೇಶಕ ಪ್ರಭಾಕರ ಜೋಶಿ ಸಚಿವರಲ್ಲಿ ಕೋರಿದರು.
ಸ್ಪಂದಿಸಿದ ಸಚಿವರು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರಿಗೆ ಕರೆ ಮಾಡಿ, ವಾರದಲ್ಲಿ ಭವನವನ್ನು ರಂಗಾಯಣಕ್ಕೆ ಹಸ್ತಾಂತರಿಸಲು ಸೂಚಿಸಿದರು. ಭವನ ಪಡೆದುಕೊಂಡ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಣ್ಣ- ಪುಟ್ಟ ದುರಸ್ತಿ ಮಾಡಿಸಿ ಸಾಂಸ್ಕೃತಿಕ ಚಟುವಟಿಕೆ ನಡೆಸಲು ನಿದರ್ೇಶಕರಿಗೆ ಹಾಗೂ ಆಡಳಿತಾಧಿಕಾರಿಗೆ ತಾಕೀತು ಮಾಡಿದರು.
ಸಾರ್ವಜನಿಕರಿಂದ ಅಹವಾಲು ಪತ್ರಗಳನ್ನು ಸಚಿವರು ಸ್ವೀಕರಿಸಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿಕೊಂಡರು. ನಂತರ ರಂಗಾಯಣದ ಕಲಾವಿದರು ಅಭಿನಯಿಸಿದ ದಾಸಶ್ರೇಷ್ಠ ಶ್ರೀ ಪುರಂದರ ದಾಸರ ಜೀವನದ ಕಥಾಹಂದರ ಹೊಂದಿರುವ ಸಿರಿಪುರಂದರ ನಾಟಕವನ್ನು ಸಚಿವರು ವೀಕ್ಷಿಸಿದರು.
ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ದತ್ತಪ್ಪ ಸಾಗನೂರ ಇದ್ದರು.